ಏರೋ ಷೋ ಉದ್ಘಾಟನೆ ಮಾಡಿದರೆ ಬಡವರ ಕಷ್ಟ ಪರಿಹಾರ ಆಗಲ್ಲ: ಕುಮಾರಸ್ವಾಮಿ

0
17

ಹುಬ್ಬಳ್ಳಿ : ಏರೋ ಷೋ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಿದ್ದಾರೆ. ಏರೋ ಷೋ ಏನೂ ಮೊದಲ ಬಾರಿ ನಡೆಯುತ್ತಿಲ್ಲ. ಇದು 14 ನೇ ಏರೋ ಷೋ. ಯಾವುದೇ ಸರ್ಕಾರ ಇದ್ದರೂ ಅದು ನಡದೇ ನಡೆಯುತ್ತದೆ. ಇದನ್ನು ಉದ್ಘಾಟಿಸಲು ಪ್ರಧಾನಿ ಬಂದರೆ ಬಡವರ, ರೈತರ ಕಷ್ಟ ಪರಿಹಾರ ಆಗಿ ಬಿಡುತ್ತದೆಯೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಸುತ್ತಿರುವುದರಿಂದ ರಾಜ್ಯದ ರೈತರಿಗೆ, ಬಡವರ ಕಷ್ಟ ನೀಗಲು ಏನು ಮಾಡಿದ್ದಾರೆ ಎಂಬುದನ್ನ ಹೇಳಲು ಬಿಜೆಪಿಯವರ ಬಳಿ ವಿಷಯಗಳಿಲ್ಲ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳಿಗೆ ರಾಷ್ಟ್ರೀಯ ನಾಯಕರನ್ನು ಕರೆತರುತ್ತಿದ್ದಾರೆ ಎಂದು ಟೀಕಿಸಿದರು.

Previous articleಇನ್ನು ಹತ್ತು ವರ್ಷ ಆದ್ರೂ ಕಾಂಗ್ರೆಸ್ ನವರಿಗೆ ಬಿಜೆಪಿ ಕಿತ್ತು ಹಾಕಲು ಆಗಲ್ಲ: ಕುಮಾರಸ್ವಾಮಿ
Next articleಏರೋ ಇಂಡಿಯಾ 2023ಕ್ಕೆ ಚಾಲನೆ