ಎರಡು ವರ್ಷದ ಮಗುವಿನಿಂದ ಕೂದಲು ದಾನ

0
18
barath

ಮಂಗಳೂರು: ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲು ಎರಡು ವರ್ಷದ ಮಗುವೊಂದು ತನ್ನ ಕೂದಲನ್ನು ದಾನ ಮಾಡುವ ಮೂಲಕ ಮಾದರಿಯಾಗಿದ್ದಾಲೆ.
ಮಂಗಳೂರು ಮರೋಳಿಯ ಭರತ್ ಕುಲಾಲ್ ಮತ್ತು ಸುಮಲತಾ ಅವರ ಪುತ್ರಿ ಆದ್ಯ ಕುಲಾಲ್ ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲು ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಈ ವಿಷಯವನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ ಈ ಮಗುವಿನ ಧೈರ್ಯ ಮತ್ತು ಆಸಕ್ತಿಯನ್ನು ನೋಡಿ ನಾನು ನಿಜವಾಗಿಯೂ ಭಾವುಕನಾದೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾಳೆ, ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಸಲ್ಲಿಸಲು ನಮ್ಮಲ್ಲಿ ಅನೇಕರನ್ನು ಪ್ರೇರೇಪಿಸಿದ್ದಾಳೆ ಎಂದು ಶಾಸಕರು ಹೇಳಿದ್ದಾರೆ.

Previous articleಹೆಲಿಕಾಪ್ಟರ್ ಪತನ: ಮೃತರಲ್ಲಿ ಕಾಸರಗೋಡು ಜಿಲ್ಲೆಯ ಸೈನಿಕ
Next articleಕಾಂತಾರ ಸಿನಿಮಾ ವೀಕ್ಷಿಸಿದ ಡಿಸಿ, ಎಸ್ಪಿ