ಎಣ್ಣೆ ಲಾರಿ ಪಲ್ಟಿ: ಮುಗಿಬಿದ್ದ ಜನ

0
12

ವಿಜಯನಗರ: ಎಣ್ಣೆ ತುಂಬಿದ್ದ ಲಾರಿ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಅಡುಗೆ ಎಣ್ಣೆ ತುಂಬಿದ್ದ ಲಾರಿ ಕೂಡ್ಲಿಗಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬಣವಿಕಲ್ಲು ಗ್ರಾಮದ ಹೆದ್ದಾರಿ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜನ ಲಾರಿಯಲ್ಲಿದ್ದ ಎಣ್ಣೆ ತುಂಬಲು ಕೊಡ, ಕ್ಯಾನ್‌ ಹಿಡಿದು ಮುಗಿಬಿದ್ದಿದ್ದಾರೆ. ಲಾರಿ ಚಾಲಕ, ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾನಾಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleTV ರಿಮೋಟ್ ಗಾಗಿ ಜಗಳ: ತಂದೆಯಿಂದ ಮಗನ ಹತ್ಯೆ
Next articleಶ್ರೀರಂಗಪಟ್ಟಣ: ಭಗವಾನ್ ಅವಹೇಳನಾಕಾರಿ ಹೇಳಿಕೆಗೆ ತೀವ್ರ ಖಂಡನೆ