ಇದೇನು ಸಭ್ಯತೆ!

0
13
ವಕಿಲರು

ಧಾರವಾಡ: ಪೊಲೀಸ್ ಅಧಿಕಾರಿಯ ಅಸಭ್ಯ ವರ್ತನೆ ಖಂಡಿಸಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮುಂದೆ ಸಾಗಲು ಯತ್ನಿಸಿದ ಯುವಕನ ದ್ವಿಚಕ್ರವಾಹನ ಬೀಳಿಸಿ ಅವನನ್ನು ಹೊಡೆದು ವಕೀಲರು ಅಸಭ್ಯ ವರ್ತನೆ ತೋರಿದರು.
ಅರ್ಜಂಟ್ ಕೆಲಸ ಇದೆ, ನನ್ನನ್ನು ಹೋಗಲು ಬಿಡಿ ಎಂದು ಕೋರಿದರೂ ವಕೀಲರು ಅವಕಾಶ ನೀಡಲಿಲ್ಲ. ಎಲ್ಲರೂ ಸುಮ್ಮನೇ ನಿಂತಿದ್ದಾರೆ. ನೀನು ಪ್ರತಿಭಟನೆ ಮುಗಿಯುವರೆಗೆ ಸುಮ್ಮನೇ ನಿಲ್ಲಬೇಕೆಂದು ತಾಕೀತು ಮಾಡಿದರು. ಆಗ ಯುವಕ ಮಾನವ ಸರಪಳಿ ದಾಟಿ ಮುಂದೆ ಸಾಗಲು ಯತ್ನಿಸಿದಾಗ ಆತನ ವಾಹನವನ್ನು ಬೀಳಿಸಿ ಆತನನ್ನು ಥಳಿಸಿದರು. ಆಗ ಪೊಲೀಸರು ಬಂದು ಯುವಕನ ವಾಹನ ಸಾಗಲು ಅನುವು ಮಾಡಿಕೊಟ್ಟರು. ಅಟೋ ಚಾಲಕರೊಂದಿಗೂ ವಕೀಲರು ಮಾತಿನ ಚಕಮಕಿ ನಡೆಸಿದರು. ವಕೀಲರ ದೌರ್ಜನ್ಯವನ್ನು ಸಾರ್ವಜನಿಕರು ಖಂಡಿಸಿದರು.

Previous articleಬೆಂಗಳೂರು- ಮೈಸೂರು ಬೈಪಾಸ್; ಅಪರಿಚಿತ ವಾಹನ ಡಿಕ್ಕಿಯಿಂದ ಚಿರತೆ ಸಾವು
Next articleಎಂಇಎಸ್ ಕಾರ್ಯಕರ್ತರಿಗೆ ಗಡಿ ಪ್ರವೇಶಿಸಲು ಸಿಗದ ಅವಕಾಶ