ಇದು 100% ಬಿಜೆಪಿ ಬಚಾವೋ ಬಜೆಟ್‌!

0
23

ಪ್ರಸಕ್ತ ಸಾಲಿನ ಬಜೆಟ್‌ ಅನ್ನು ಕನ್ನಡಿಗರಿಗೆ ಮಾಡಿರುವ ಮಹಾ ದ್ರೋಹ

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್‌ ಅನ್ನು ಕನ್ನಡಿಗರಿಗೆ ಮಾಡಿರುವ ಮಹಾ ದ್ರೋಹ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರ ಮೇಲೆ ನಾವು ನಂಬಿಕೆ ಇಟ್ಟಿದ್ದೆವು. ಆದರೆ ಆಂಧ್ರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೆ ಮಣೆ ಹಾಕುವ ಮೂಲಕ ಸರ್ಕಾರವನ್ನು ಉಳಿಸಿಕೊಳ್ಳುವ ಯತ್ನ ಮಾಡಲಾಗಿದೆ ಅಷ್ಟೆ. ಕರ್ನಾಟಕಕ್ಕೆ ಎಂದಿನಂತೆ ಕೇಂದ್ರ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ತೋರುವುದನ್ನು ಮುಂದುವರಿಸಿದೆ. ವಿಶೇಷವಾಗಿ ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಿಗೆ ಅನ್ಯಾಯವಾಗಿದೆ. ರಾಜ್ಯದಲ್ಲಿ ಬಾಕಿ ಇರುವ ಯಾವುದೇ ಪ್ರಮುಖ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಪ್ರಸಕ್ತ ಸಾಲಿನ ಬಜೆಟ್‌ ಅನ್ನು ಕನ್ನಡಿಗರಿಗೆ ಮಾಡಿರುವ ಮಹಾ ದ್ರೋಹ ಎಂದು ಒಂದೇ ಸಾಲಿನಲ್ಲಿ ಹೇಳಬಹುದು ಎಂದಿದ್ದಾರೆ.

Previous articleವಿಕಸಿತ ಭಾರತ ಮಾಡುವ ಅಭಿವೃದ್ಧಿ ಪರವಾದ ಬಜೆಟ್‌
Next articleರಾಜ್ಯಕ್ಕೆ ಚೊಂಬು ನೀಡಿದ ಸೀತಾರಾಮನ್‌