ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ನಡೆಸಲಿರುವ ನಮೋ.
ನೂತನ ಮೈ-ಬೆಂ ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಲಿರುವ ಪ್ರಧಾನಿ ಮೋದಿ.118 ಕಿ.ಮೀ ಉದ್ದದ ಮೈ-ಬೆಂ ದಶಪಥ ಹೆದ್ದಾರಿ.
ಒಟ್ಟು 8479 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ದಶಪಥ ಹೈವೆ.
ಕಾಮಗಾರಿ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ.
ಮಂಡ್ಯದ ಅಮರಾವತಿ ಹೋಟೇಲ್ ಬಳಿ ಎಕ್ಸ್ ಪ್ರೆಸ್ ಹೈವೆಯಲ್ಲಿ ಹೆದ್ದಾರಿ ಉದ್ಘಾಟಿಸಲಿರುವ ಮೋದಿ.
ವಿವಿಧ ಕಲಾ ತಂಡಗಳಿಂದ ಮೋದಿಗೆ ಸ್ವಾಗತ.
ಮಧ್ಯಾಹ್ನ 11.40 ಕ್ಕೆ ಹೆದ್ದಾರಿ ಲೋಕಾರ್ಪಣೆ.
ಮಧ್ಯಾಹ್ನ 12.15 ರಿಂದ 1.15 ರವರೆಗೆ ವೇದಿಕೆ ಕಾರ್ಯಕ್ರಮ.
ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿ ಅದ್ದೂರಿ ವೇದಿಕೆ ನಿರ್ಮಾಣ.
ಅದಕ್ಕು ಮುನ್ನ ಮಂಡ್ಯ ನಗರದಲ್ಲಿ 1.8 ಕಿ.ಮೀ ರೋಡ್ ಶೋ.
ಬೆಳಿಗ್ಗೆ 11.20 ಕ್ಕೆ ಮಂಡ್ಯಕ್ಕೆ ಆಗಮಿಸಲಿರುವ ಮೋದಿ.
ಪಿಇಎಸ್ ಕಾಲೇಜು ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮನ.
ಬೆಳಿಗ್ಗೆ 11.25 ಮಂಡ್ಯದ ಪ್ರವಾಸಿ ಮಂದಿರದಿಂದ ರೋಡ್ ಶೋ ಆರಂಭ.
ಬೆಳಿಗ್ಗೆ 11.30 ಕ್ಕೆ ಸಂಜಯ್ ವೃತ್ತಕ್ಕೆ ಆಗಮನ.
ಬೆಳಿಗ್ಗೆ 11.33 ಕ್ಕೆ ಮಹಾವೀರ್ ವೃತ್ತಕ್ಕೆ ಎಂಟ್ರಿ.
ಬೆಳಿಗ್ಗೆ 11.37 ಕ್ಕೆ ನಂದ ವೃತ್ತಕ್ಕೆ ಮೋದಿ ರೋಡ್ ಶೋ ಎಂಟ್ರಿ.
ಬೆಳಿಗ್ಗೆ 11.40 ಕ್ಕೆ ಅಮರಾವತಿ ಬಳಿ ಎಕ್ಸ್ ಪ್ರೆಸ್ ಹೈವೆಗೆ ಎಂಟ್ರಿ.
ಕಲಾತಂಡಗಳಿಂದ ಅದ್ದೂರಿ ಸ್ವಾಗತಕ್ಕೆ ತಯಾರಿ.
50 ಮೀಟರ್ ಎಕ್ಸ್ ಪ್ರೆಸ್ ಹೈವೆಯಲ್ಲಿ ನಡೆಯಲಿರುವ ಮೋದಿ.
ಹೈವೆ ಲೋಕಾರ್ಪಣೆ ನಂತರ ಗಜ್ಜಲೆಗೆರೆ ವೇದಿಕೆಯತ್ತ ಪ್ರಯಾಣ.
ವೇದಿಕೆ ಕಾರ್ಯಕ್ರಮ ಮುಗಿಸಿ ಗೆಜ್ಜಲಗೆರೆ ಬಳಿ ನಿರ್ಮಾಣವಾಗಿರುವ ಹೆಲಿಪ್ಯಾಡ್ ನಿಂದ ನಿರ್ಗಮನ.