ಆಟೋದಲ್ಲಿ ನಿಗೂಢ ಸ್ಫೋಟ: ಭಯಬಿದ್ದ ಜನತೆ

0
19
ಸ್ಪೋಟ

ಮಂಗಳೂರು: ಕಂಕನಾಡಿ ಪೊಲೀಸ್ ಠಾಣೆ ಬಳಿ ಚಲಿಸುತ್ತಿದ್ದ ಅಟೋ ರಿಕ್ಷಾದಲ್ಲಿ ನಿಗೂಢ ರೀತಿಯಲ್ಲಿ ಸ್ಫೋಟ ಸಂಭವಿಸಿದ್ದು, ಜನತೆ ಭಯಗೊಂಡಿದ್ದಾರೆ. ನಾಗುರಿಯಿಂದ ಪಂಪ್‌ವೆಲ್ ಕಡೆಗೆ ಆಟೋರಿಕ್ಷಾ ಸಂಚರಿಸುತ್ತಿತ್ತು. ನಾಗುರಿಯಲ್ಲಿ ಆಟೋರಿಕ್ಷಾ ಏರಿದ್ದ ಪ್ರಯಾಣಿಕನ ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಬೆಂಕಿ ಕಾಣಿಸಿದೆ. ಈ ವೇಳೆ ಬ್ಯಾಗ್ ಹಿಡಿದುಕೊಂಡ ವ್ಯಕ್ತಿಗೂ ಬೆಂಕಿ ತಗುಲಿದೆ. ಬೆಂಕಿ ತಗುಲಿದ ಸಂದರ್ಭ ಅಟೋ ಒಳಭಾಗ ಸುಟ್ಟು ಹೋಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಬೆಂಕಿ ಕಾಣಿಸಿಕೊಂಡಿದೆ ಎಂದು ಅಟೋ ಚಾಲಕ ಹೇಳುತ್ತಿzನೆ. ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಲಾಗುತ್ತದೆ. ಸ್ಫೋಟದ ಬಗ್ಗೆ ಪ್ರತ್ಯP ಸಾಕ್ಷಿಗಳು ಏನು ಹೇಳಿಲ್ಲ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Previous articleಕೈ ಮುಗಿತೇವಿರಿ ಸಾಹೇಬ್ರ ನಮ್ಮನ್ನ ಕೈ ಬಿಡಬೇಡಿ… ಸಿದ್ದುಗೆ ಮನವಿ ಬಾದಾಮಿ ಕ್ಷೇತ್ರದ ಜನತೆ…
Next articleಅಪ್ರಾಪ್ತರಿಗೆ ವಾಹನ ನೀಡಿದರೆ ಜೋಕೆ