ಅಕ್ಟೋಬರ್ 13ರಂದು “ಚಲೋ ಚಾಮುಂಡಿಬೆಟ್ಟ”

0
17

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ಮಾಡಬೇಕೆಂಬ ವಿಚಾರವನ್ನು ವಿರೋಧಿಸಿ ಅಕ್ಟೋಬರ್ 13 ರಂದು ಚಲೋ ಚಾಮುಂಡಿ ಬೆಟ್ಟ ಜಾಥವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಅವರು, ಗೌರವ ಮತ್ತು ಭಕ್ತಿಯಿಂದ ಆಚರಣೆ ಮಾಡುವ ದಸರಾ ಹಬ್ಬಕ್ಕೆ ತನ್ನದೇ ಆದ ಪರಂಪರೆಯಿದೆ. ಮಹಿಷಾ ದಸರಾ ಆಚರಣೆಯ ವಿಚಾರದಿಂದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯುಂಟಾಗಲಿದ್ದು, ಇದನ್ನು ವಿರೋಧಿಸಿ ಚಲೋ ಚಾಮುಂಡಿ ಬೆಟ್ಟ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಚಾಮುಂಡಿ ದೇವಿಯ ಭಕ್ತರು ಸೇರಿದಂತೆ 5 ಸಾವಿರಕ್ಕೂ ಹೆಚ್ಚಿನ ಜನರು ಜಾಥದಲ್ಲಿ ಭಾಗಿಯಾಗಲಿದ್ದು, ದಸರಾ ಹಾಗೂ ಚಾಮುಂಡಿ ದೇವಿಯ ಮಹತ್ವ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು

Previous articleಕರ್ನಾಟಕದಲ್ಲಿ ತಾಲಿಬಾನ್ ಸರಕಾರ
Next articleಬೀದರ್ ಡಿಸಿಸಿ ಬ್ಯಾಂಕ್ ಚುನಾವಣೆ: ಅಮರ ಖಂಡ್ರೆ ಪೆನಲ್‌ಗೆ ಮೇಲುಗೈ