ಅಹಮದಬಾದ್‌ನಲ್ಲಿ ಕನ್ನಡ ಭವನ ಸರಕಾರ ನಿಶಾನೆ

0
25

ಅಹಮದಬಾದ್: ಗುಜರಾತಿನ ವಾಣಿಜ್ಯ ರಾಜಧಾನಿ ಅಹಮದಬಾದ್‌ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಇಲ್ಲಿನ ಸರಕಾರ ಹಸಿರು ನಿಶಾನೆ ತೋರಿದೆ.
ಶನಿವಾರ ಇಲ್ಲಿ ನಡೆದ ಅಹಮದಬಾದ್ ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲ್ ಈ ಘೋಷಣೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ, ಅಹಮದಬಾದ್‌ನಲ್ಲಿ ಕನ್ನಡ ಸಂಘ ಸ್ಥಾಪನೆಯಾಗಿ 75 ವರ್ಷಗಳಾಗಿದ್ದರೂ ಇನ್ನೂ ಕನ್ನಡಿಗರಿಗೆ ಒಂದೆಡೆ ಕಲೆ, ಸಾಂಸ್ಕೃತಿಕ ಚಟುವಟಿಕೆ ನಡೆಸುವುದಕ್ಕೆ ದೊಡ್ಡ ನಗರದಲ್ಲಿ ಜಾಗವಿಲ್ಲದಂತಾಗಿರುವುದರಿಂದ ಗುಜರಾತ್ ಸರಕಾರ ಈ ವಿಷಯ ಸಕಾರಾತ್ಮಕವಾಗಿ ಪರಿಗಣಿಸಬೇಕು ಕನ್ನಡ ಭವನ ನಿರ್ಮಿಸುವಂತೆ ಮುಖ್ಯಮಂತ್ರಿ ಪಟೇಲ್ ಅವರನ್ನು ಕೋರಿದರು. ಗುಜರಾತ್ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ಇನ್ನೊಂದು ವರ್ಷದಲ್ಲಿ ಜಮೀನು ನೀಡುವುದಾಗಿ ಪ್ರಕಟಿಸಿದರು. ರಾಜ್ಯದ ಸಂಸದರು, ಶಾಸಕರು, ಗಣ್ಯರು ಇದ್ದರು.

Previous articleವೀರಯೋಧನ ವೃತ್ತಕ್ಕೆ ಹಸಿರು ಹೊದಿಕೆ ಆಕ್ರೋಶ
Next articleಯತ್ನಾಳ ಹೇಳಿಕೆ ಹೈಕಮಾಂಡ್ ಗಮನಿಸುತ್ತೆ