ಅಲೋಕ ಕುಲಕರ್ಣಿಗೆ ಲಂಡನ್‌ನಲ್ಲಿ `ಎಂಆರ್‌ಸಿಪಿ’ ಪದವಿ

0
23
DR ALOK

ಹುಬ್ಬಳ್ಳಿ: ನರ ರೋಗ ಹಾಗೂ ಮೆದುಳು ರೋಗದ ತಜ್ಞರಾದ ನಗರದ ಡಾ. ಆಲೋಕ ಕುಲಕರ್ಣಿ ಅವರು ಇತ್ತೀಚಿಗೆ ಲಂಡನ್ ನಗರದಲ್ಲಿ ವಿಶ್ವದಲ್ಲಿಯೇ ಪ್ರತಿಷ್ಠಿತ ಪದವಿಯಾದ ಎಮ್.ಆರ್.ಸಿ.ಪಿ. (ಸೈಕ್ಯಾಟ್ರಿ) ಪದವಿಯನ್ನು ಪಡೆದರು.
ಕಾರ್ಯಕ್ರಮದಲ್ಲಿ ಲಂಡನ್ ಮಹಾನಗರದ ರಾಯಲ್ ಕಾಲೇಜ ಆಫ್ ಸೈಕ್ಯಾಟ್ರಿಸ್ಟ್ದ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇಡೀ ಭಾರತ ದೇಶದಿಂದ ಸುಮಾರು ನಾಲ್ಕು ವೈದ್ಯರು ಮಾತ್ರ ಎಮ್.ಆರ್.ಸಿ.ಪಿ. (ಸೈಕ್ಯಾಟ್ರಿ) ಪದವಿಯನ್ನು ಪಡೆದಿದ್ದು ಇವರಲ್ಲಿ ಡಾ. ಆಲೋಕ ಕುಲಕರ್ಣಿ ಅವರೂ ಒಬ್ಬರು.
ರಾಯಲ್ ಕಾಲೇಜ್ ಆಫ್ ಸೈಕ್ಯಾಟ್ರಿಸ್ಟ್ನ ಅಧ್ಯಕ್ಷರಾದ ಡಾ ಜೇಮ್ಸ್ ಅಡ್ರಿಯಾನ್ ಪ್ರದಾನ ಮಾಡಿದರು. ಡಾ. ಆಲೋಕ ಅವರು ನಗರದ ಖ್ಯಾತ ವೈದ್ಯರಾದ ಡಾ. ವಿನೋದ ಕುಲಕರ್ಣಿ ಅವರ ಪುತ್ರರು.

Previous articleಬೆದರಿಕೆಗೆ ಹೆದರೋಲ್ಲ, ಹಿಂದುತ್ವದ ವೃತ ನಿರಂತರ: ಮುತಾಲಿಕ್‌
Next articleಬೀದರ್: ಟ್ರಕ್- ಆಟೋ ಮಧ್ಯೆ ಭೀಕರ ಅಪಘಾತ, ಮೃತರ ಸಂಖ್ಯೆ 7ಕ್ಕೇ ಏರಿಕೆ