Home ನಮ್ಮ ಜಿಲ್ಲೆ ಉಡುಪಿ ಅರ್ಕಾವತಿ ಹಗರಣ ಬಯಲಿಗೆಳೆಯಲಿದೆ ಸರ್ಕಾರ: ಕಟೀಲ್

ಅರ್ಕಾವತಿ ಹಗರಣ ಬಯಲಿಗೆಳೆಯಲಿದೆ ಸರ್ಕಾರ: ಕಟೀಲ್

0
141
ಅರ್ಕಾವತಿ ಹಗರಣ ಬಯಲಿಗೆಳೆಯಲಿದೆ ಸರ್ಕಾರ: ಕಟೀಲ್

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಕಾವತಿ ಡಿನೋಟಿಫಿಕೇಶನ್ ಹಗರಣ ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. ಅಲ್ಲದೆ ದಾಖಲೆ ಮುಚ್ಚಿ ಹಾಕಲು ಯತ್ನಿಸಿದ್ದು, ಶೀಘ್ರವೇ ಬಿಜೆಪಿ ಸರ್ಕಾರ ಹೊರ ತೆಗೆಯಲಿದೆ. ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲಾವಧಿಯಲ್ಲಿನ ಹಗರಣಗಳು ಹೊರ ಬರಲಿವೆ ಎಂದು ಅವರು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನಗೆ ಅಸಮಾಧಾನ ಇಲ್ಲ. ಖಾಲಿ ಇರುವ ಸ್ಥಾನ ತುಂಬಬೇಕು ಎಂದಿದ್ದಾರೆ. ಸಂಪುಟ ವಿಸ್ತರಣೆ ಮಾಡಿ ಎಂಬ ಬೇಡಿಕೆ ಇಟ್ಟಿದ್ದು, ಚರ್ಚಿಸಿ ವಿಸ್ತರಣೆ ಮಾಡಲಾಗುತ್ತದೆ. ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ಬಿಜೆಪಿ ಯಾತ್ರೆ 11ರಿಂದ
ಅ.11ರಿಂದ ಬಿಜೆಪಿ ಜನಸಂಕಲ್ಪ ಯಾತ್ರೆ ಪ್ರಾರಂಭವಾಗಲಿದೆ. ನಾನು ಈಗಾಗಲೇ ಪ್ರವಾಸ ಆರಂಭಿಸಿದ್ದೇನೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರವಾಸ ನಡೆಸಲಿದ್ದಾರೆ ಎಂದರು.