ಅಪರೂಪದ ಸಾರಿಬಾಳ ಹಾವು ಪತ್ತೆ

0
7

ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಅರಂತೊಟ್ಟು ಎಂಬಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆಯಾಗಿದೆ. ಉರಗತಜ್ಞ ಸ್ನೇಕ್ ಅಶೋಕ್ ಅವರು ಹಾವುನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ದೀಪಕ್ ಎಂಬುವರ ಮನೆಯಲ್ಲಿ ಸುಮಾರು 5 ಅಡಿ ಉದ್ದದ ಸಾರಿಬಾಳ ಹಾವು ಕೋಳಿ ಮರಿಯನ್ನು ನುಂಗುತ್ತಿತ್ತು. ಇದನ್ನು ಕಂಡ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅವರು ಹಾವನ್ನು ರಕ್ಷಿಸಿದ್ದಾರೆ.
ಫೋರೆಸ್ಟನ್ಸ್ ಬೆಕ್ಕು ಹಾವು ಎಂದು ಕರೆಯಲ್ಪಡುವ ಈ ಸಾರಿಬಾಳ ಹೆಚ್ಚಾಗಿ ಗುಜರಾತ್, ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡು ಬರುತ್ತದೆ. ಇವು ಜನವಸತಿ ಪ್ರದೇಶದಲ್ಲಿ ಕಂಡು ಬರುವುದು ತೀರಾ ವಿರಳ. ರಾತ್ರಿ ಸಮಯ ಹೆಚ್ಚಿನ ಸಂಚಾರ ನಡೆಸುವ ಇವುಗಳ ಪ್ರಮುಖ ಆಹಾರ ಸಣ್ಣ ಪಕ್ಷಿ, ಮೊಟ್ಟೆ, ಇಲಿ, ಬಾವಲಿ ಇತ್ಯಾದಿ. ಇವುಗಳಲ್ಲೂ ಎರಡು ಪ್ರಭೇದಗಳಿವೆ. ಇವು ವಿಷ ರಹಿತ ಹಾವುಗಳಾಗಿದ್ದು, ಕಟ್ಟುಹಾವನ್ನು ಹೋಲುವುದರಿಂದ ಇವು ಕಂಡು ಬಂದಲ್ಲಿ ಜನರು ಕೊಲ್ಲಲು ಮುಂದಾಗುತ್ತಿದ್ದಾರೆ. ಎಲ್ಲ ಜೀವಿಗಳಂತೆ ಹಾವುಗಳಿಗೂ ಬದುಕುವ ಹಕ್ಕಿದೆ ಯಾವುದೇ ಹಾವು ಕಂಡು ಬಂದರೆ ಅವುಗಳನ್ನು ರಕ್ಷಿಸುವುದು ಮುಖ್ಯ ಎಂದು ಸ್ನೇಕ್ ಅಶೋಕ್ ತಿಳಿಸಿದ್ದಾರೆ.

Previous articleಮಗು ಅಪಹರಣ ಯತ್ನ
Next articleಕುಡುಕನಿಗೆ ಸಿಕ್ಕಿದ ದುಡ್ಡು..