ರಾಯಚೂರು: ನಿರ್ಮಿತಿ ಕೇಂದ್ರದ ನಿರ್ದೇಶಕ ಅಧಿಕಾರಿ ಶರಣಬಸವ ಮನೆ ಹಾಗೂ ಕಚೇರಿ ಮೇಲೆ ಸೋಮವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡವು ದಾಳಿ ನಡೆಸಿದೆ.
ರಾಯಚೂರು ಕ್ಯಾಶ್ಯುಟೆಕ್ ಯೋಜನಾ ನಿರ್ದೇಕ ಶರಣಬಸವ ಪಟ್ಟೆದ್ ಅವರ ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಅವರ ಐಡಿಎಸ್ ಎಂಟಿ ಬಡಾವಣೆಯಲ್ಲಿನ ನಿವಾಸ ಹಾಗೂ ರಾಯಚೂರು ತಾಲೂಕಿನ ಶಕ್ತಿನಗರ ಬಳಿ ಇರುವ ಕ್ಯಾಶ್ಯುಟೆಕ್ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ ಲೋಕಾಯುಕ್ತ ತಂಡವು ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.