ಧಾರವಾಡ: ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಅವರು ತಮ್ಮ ಅಂಗರಕ್ಷಕನಿಂದ ಶೂ ಕಟ್ಟಿಸಿಕೊಂಡ ಪ್ರಸಂಗ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಸಪ್ತಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಬುಧವಾರ ದಿಢೀರ್ ಭೇಟಿ ನೀಡಿದ ಸಚಿವ ಮಹಾದೇವಪ್ಪ ಅಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೇ ಊಟದ ವ್ಯವಸ್ಥೆ ಬಗ್ಗೆಯೂ ವಿಚಾರಿಸಿ, ವಿದ್ಯಾರ್ಥಿಗಳಿಂದ ಅಹವಾಲು ಕೂಡ ಸ್ವೀಕರಿಸಿದರು.
ಹಾಸ್ಟೆಲ್‌ಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಿದ ನಂತರ ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿ ಸಚಿವ ಮಹಾದೇವಪ್ಪ ಅವರು ತಮ್ಮ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಪ್ರಸಂಗ ನಡೆಯಿತು.
ಈ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನಂಜನಗೂಡು ಉಪಚುನಾವಣೆ ಸಂದರ್ಭದಲ್ಲಿ ಚಪ್ಪೆಯ(ಹಿಪ್) ಭಾಗದಲ್ಲಿ ನೋವು ಕಾಣಿಸಿಕೊಂಡು ಸರಿಯಾಗಿ ಬಾಗಲು ಆಗುವುದಿಲ್ಲ. ಹಾಗಾಗಿ ನನ್ನ ಮೇಲಿನ ಕಾಳಜಿಯಿಂದ ಅಂಗರಕ್ಷಕ ಶೂ ಹಾಕಿದ್ದಾರೆಯೇ ವಿನಃ ಅನ್ಯ ಉದ್ದೇಶವಿಲ್ಲ ಎಂದರು.