ʻನಾನು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇನೆ, ಮಾಂಸ ತಿಂದು ದೇವಾಲಯಕ್ಕೆ ಹೋಗುತ್ತೀನಿ, ಏನಿವಾಗ ಎಂದು ಕೇಳುವುದಿಲ್ಲʼ

0
13
ravi

ಮಂಡ್ಯ: ಬಿಜೆಪಿ ಶಾಸಕ ಸಿ.ಟಿ ರವಿ ಅವರು ಮಾಂಸ ತಿಂದು ಭಟ್ಕಳದ ನಾಗಬನ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಆರೋಪಕ್ಕೆ ಸಿ.ಟಿ ರವಿ ಅವರು ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದರು.
ನಾನು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇನೆ. ಆದರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ’ ಎಂದು ಸಿ.ಟಿ.ರವಿ ಹೇಳಿದರು.
‘ಈ ಕುರಿತು ಕೆಲವರು ವಿವಾದ ಹುಟ್ಟು ಹಾಕುತ್ತಿದ್ದಾರೆ. ನಾನು ಮಾಂಸ ತಿನ್ನುತ್ತೇನೆ, ಹಾಗಂತ ತಿಂದು ದಾರ್ಷ್ಟ್ಯ ತೋರಿಸುವುದಿಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗುತ್ತೀನಿ, ಏನಿವಾಗ ಎಂದು ಕೇಳುವುದಿಲ್ಲ. ವ್ರತ, ಪೂಜೆ ಮಾಡುವವನು ನಾನು, ದೇವರ ಬಗ್ಗೆ ಶ್ರದ್ಧೆ ಇದೆ’ ಎಂದರು.
‘ಕ್ಷೇತ್ರ ಬದಲಾವಣೆ ಸಂಬಂಧ ಹೈಕಮಾಂಡ್‌ ಯಾವುದೇ ಸೂಚನೆ ನೀಡಿದರೂ ಪಾಲಿಸುತ್ತೇನೆ. ಪಕ್ಷದ ಕೆಲಸಕ್ಕೆ ಸದಾ ಸಿದ್ಧನಿದ್ದೇನೆ. ಚಿಕ್ಕಮಗಳೂರು, ಮಂಡ್ಯ ಮಾತ್ರವಲ್ಲ, ಜಮ್ಮು ಕಾಶ್ಮೀರದಲ್ಲೂ ಸ್ಪರ್ಧೆಗೆ ಸಿದ್ಧ’ ಎಂದರು.

Previous articleತಂತ್ರಜ್ಞಾನ, ಸೇವಾ ಮನೋಭಾವದಿಂದ ಸಾಮಾನ್ಯರಿಗೆ ಸರ್ಕಾರಿ ವ್ಯವಸ್ಥೆ ಮುಟ್ಟಿಸಲು ಸಾಧ್ಯ: ಬೊಮ್ಮಾಯಿ
Next articleರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ: ಸಚಿವೆ ಕರಂದ್ಲಾಜೆ