ರೈತರಿಗೆ ಅರ್ಥಿಕ ಶಕ್ತಿ ಬರದೇ ಈ ದೇಶ ಉದ್ಧಾರ ಆಗಲ್ಲ: ಸಿದ್ದರಾಮಯ್ಯ

0
14

ಹುಬ್ಬಳ್ಳಿ : ಇಂದು ವಿಶ್ವ ರೈತ ದಿನಾಚರಣೆ. ಈ ದೇಶದಲ್ಲಿ ರೈತರು ತುಂಬಾ ಕಷ್ಟದಲ್ಲಿದ್ದಾರೆ. ರೈತರ ಬದುಕು ಹಸನಾಗದೇ, ಅವರಿಗೆ ಆರ್ಥಿಕ ಶಕ್ತಿ ಲಭಿಸದೇ ಇದ್ದರೆ ಈ ದೇಶ ಉದ್ಧಾರ ಆಗಲ್ಲ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ ಆಯೋಜಿಸಿದ್ಧ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಶೇ 68 ಜನ ಹಳ್ಳಿಯಲ್ಲಿದ್ದಾರೆ. ಬಹುತೇಕರು ರೈತರಿದ್ದಾರೆ. ಅವರು ಬೆಳೆದ ಬೆಳೆ ಕೈಗೆ ಲಭಿಸದೇ, ಬೆಲೆ ಸಿಗದೇ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಅತಿವೃಷ್ಟಿಗೆ ತೊಗರಿ ಬೆಳೆ ಶೇ 70 ರಷ್ಟು ಹಾಳಾಯಿತು. ಅಡಿಕೆ, ಮೆಣಸು, ಹೆಸರು ಹಾಳಾಯಿತು. ಭತ್ತ, ರಾಗಿಗೆ ಬೆಲೆ ಬಿದ್ದು ಹೋಗಿದೆ ಎಂದು ಸಮಸ್ಯೆ ವಿವರಿಸಿದರು. ರೈತರ ಈ ಎಲ್ಲಾ ಸಂಕಷ್ಟಗಳು ನೀಗಬೇಕು. ಅವರ ಬದುಕು ಉಜ್ವಲವಾಗಲಿ ಎಂದು ಹಾರೈಸೋಣ ಎಂದು ನುಡಿದರು.

Previous articleಯುವತಿಯನ್ನು ಕೊಲೆ ಮಾಡಿದ್ದ ಪಾಗಲ್‌ಪ್ರೇಮಿ ಆತ್ಮಹತ್ಯೆ!
Next articleಮಾಸ್ಕ್ ಧರಿಸಿ ಡೊಳ್ಳು ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ