ಅಯೋಧ್ಯೆಯಲ್ಲಿ ಕಿಷ್ಕಿಂದೆ ನಾಡಿನ ಕಲಾವಿದರ ಬಯಲಾಟ

0
14

ಹೊಸಪೇಟೆ: ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ದಿ. ೧೪ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದ್ದು, ಮೊದಲ ನಾಲ್ಕು ದಿನ ಸಂಪೂರ್ಣ ರಾಮಾಯಣ ಬಯಲಾಟ ಪ್ರದರ್ಶನಗೊಳ್ಳಲಿದೆ.
ಕಿಷ್ಕಿಂದೆ ನಾಡೆಂದೆ ಬಿಂಬಿತ ಹೊಸಪೇಟೆಯ ೧೬ ಬಯಲಾಟ ಕಲಾವಿದರ ತಂಡ ಈ ಪ್ರದರ್ಶನ ನೀಡಲಿದ್ದು, ಬಯಲಾಟ ಕಲಾವಿದ ಕೆ.ಎಸ್.ಸತ್ಯನಾರಾಯಣ ನೇತೃತ್ವ ವಹಿಸಿದ್ದಾರೆ. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಆಹ್ವಾನ ನೀಡಿದ್ದು, ಬಹಳ ಸಂತೋಷವಾಗಿದೆ ಎಂದು ಸತ್ಯನಾರಾಯಣ ಮಾಧ್ಯಮಗಳ ಮುಂದೆ ಸಂತಸ ಹಂಚಿಕೊಂಡರು. ಪ್ರತಿ ದಿನ ಒಂದು ಗಂಟೆಯ ಬಯಲಾಟ ಪ್ರದರ್ಶನ ನೀಡಬೇಕಿದ್ದು, ಸಂಜೆ ೬ರಿಂದ ೭ರವರೆಗೆ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.
ಗುರುವಾರ ಬಯಲಾಟ ತಂಡ ಅಯೋಧ್ಯೆಗೆ ಪ್ರಯಾಣ ಬೆಳೆಸಿತು. ನಗರದ ಡಾ.ಪುನೀತ್ ರಾಜಕುಮಾರ ವೃತ್ತದಿಂದ ಪ್ರಯಾಣ ಆರಂಭಿಸಿತು.

Previous articleಬೀಚ್‌ನಲ್ಲಿ ಎತ್ತು ಇರಿದು ವಿದೇಶಿ ಮಹಿಳೆಗೆ ಗಾಯ ‌
Next article`ಸದನದಲ್ಲಿ ಎಚ್.ಕೆ ಪಾಟೀಲ’ ೫ ಸಂಪುಟಗಳ ಲೋಕಾರ್ಪಣೆ