ಬೆಂಗಳೂರು: ಭಾರತದ ಪ್ರಮುಖ ಕನ್ನಡಕ ರಿಟೇಲ್ ವ್ಯಾಪಾರಿಗಳಲ್ಲಿ ಒಂದಾದ ಟೈಟಾನ್ ಐ+ ಮತ್ತು ಪ್ರಪಂಚದ ಗ್ರಾಹಕರ ದೃಷ್ಟಿ ಮತ್ತು ಕಣ್ಣಿನ ಆರೋಗ್ಯವನ್ನು ರಕ್ಷಿಸಿ ಪಾಲಿಸುವ ಉದ್ದೇಶದಿಂದ ಮುನ್ನಡೆಯುತ್ತಿರುವ ಝೈಸ್ ಇಂಡಿಯಾ ವಿಷನ್ ಕೇರ್ ಇದೀಗ ಸಹಭಾಗಿತ್ವ ಮಾಡಿಕೊಂಡಿದ್ದು, ಈ ಸಹಭಾಗಿತ್ವದ ಅಡಿಯಲ್ಲಿ ಭಾರತದಾದ್ಯಂತ ಟೈಟಾನ್ ಐ+ ಲೆನ್ಸ್ ಡಿಸೈನ್ ಸಂಗ್ರಹದಲ್ಲಿ ಝೈಸ್‌ನ ಫೋಟೋಫ್ಯೂಷನ್ ಎಕ್ಸ್ ಫೋಟೋಕ್ರೋಮಿಕ್ ಲೆನ್ಸ್ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಘೋಷಿಸಿದೆ. ಈ ತಂತ್ರಜ್ಞಾನ ಭಾರತದಾದ್ಯಂತ ಟೈಟಾನ್ ಐ+ ಲೆನ್ಸ್ ಸಂಗ್ರಹಗಳಲ್ಲಿ ಮತ್ತು ಮಳಿಗೆಗಳಲ್ಲಿ ಲಭ್ಯವಾಗಲಿದೆ.
ಝೈಸ್ ಇಂಡಿಯಾ ವಿಷನ್ ಕೇರ್ ನಿಂದ ಟೈಟಾನ್ ಐ+ಗಾಗಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮವಾದ ಝೈಸ್ ಇನ್ನೋವೇಷನ್ ಸಮಿಟ್ ನಲ್ಲಿ ಈ ಹೊಸ ಘೋಷಣೆಯನ್ನು ಮಾಡಲಾಗಿದೆ. ಅತ್ಯಾಧುನಿಕ ಲೆನ್ಸ್ ಸಂಶೋಧನೆಯನ್ನು ಕೈಗೊಂಡು ಭಾರತೀಯ ಗ್ರಾಹಕರಿಗೆ ಕಣ್ಣಿನ ಆರೋಗ್ಯ ಪಾಲನೆಯ ಸಾಧ್ಯವಾಗಿಸುವುದರ ಕಡೆಗೆ ಗಮನ ಕೇಂದ್ರೀಕರಿಸಿ ಈ ಕಾರ್ಯಕ್ರಮವು ನಡೆಯಿತು.
ಇದನ್ನೂ ಓದಿ: ಜಯಮಾಲಾ, ಸಾ.ರಾ. ಗೋವಿಂದ್‌ಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ
ಈ ಸಹಯೋಗದ ಮೂಲಕ, ಟೈಟಾನ್ ಐ+ ತನ್ನ ಲೆನ್ಸ್ ಡಿಸೈನ್‌ಗಳ ಸಂಗ್ರಹ ಮತ್ತು ರಿಟೇಲ್ ಜಾಲದಲ್ಲಿ ಝೈಸ್‌ನ ಫೋಟೋಫ್ಯೂಷನ್ ಎಕ್ಸ್ ಫೋಟೋಕ್ರೋಮಿಕ್ ಲೆನ್ಸ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಈ ಸಹಯೋಗದ ಮೂಲಕ ಭಾರತೀಯ ಗ್ರಾಹಕರ ಅಗತ್ಯಗಳ ಬಗ್ಗೆ ಟೈಟಾನ್ ಐ+ನ ಆಳವಾದ ತಿಳುವಳಿಕೆಯ ಪರಿಣತಿಯು ಝೈಸ್‌ನ ನಿಖರ ಆಪ್ಟಿಕ್ಸ್ ಮತ್ತು ಲೆನ್ಸ್ ಆವಿಷ್ಕಾರದ ಪರಿಣತಿಯೊಂದಿಗೆ ಜೊತೆಯಾಗಲಿದೆ. ಝೈಸ್‌ನ ಫೋಟೋಫ್ಯೂಷನ್ ಎಕ್ಸ್ ಪರಿಚಯವು ಹೆಚ್ಚು ವೇಗವಾಗಿ ಬದಲಾಗುವ ಲೆನ್ಸ್‌ಗಳನ್ನು ಒದಗಿಸುತ್ತದೆ, ಅದರಲ್ಲಿ ಬ್ಲೂ-ಲೈಟ್ ಮತ್ತು ಯುವಿ ಪ್ರೊಟೆಕ್ಷನ್ ಸಂಯೋಜಿತವಾಗಿದ್ದು, ದೀರ್ಘಕಾಲೀನ ದೃಷ್ಟಿ ಒದಗುವಂತೆ ಮತ್ತು ಕಣ್ಣಿನ ಆರೋಗ್ಯ ಪಾಲನೆಗೆ ಬೆಂಬಲ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
ಪ್ರಮುಖ ವಿಶೇಷತೆಗಳು: ಟೈಟಾನ್ ಐ+ ತನ್ನ ಟೈಟಾನ್ ಲೆನ್ಸ್ ಗಳೊಂದಿಗೆ ಫೋಟೋಫ್ಯೂಷನ್‌ಲ ಎಕ್ಸ್ ಲೆನ್ಸ್ ತಂತ್ರಜ್ಞಾನವನ್ನು ನೀಡಲಿದೆ. ಈ ತಂತ್ರಜ್ಞಾನವನ್ನು ಸೂರ್ಯನ ಬೆಳಕಿನಲ್ಲಿ ಹೆಚ್ಚು ವೇಗವಾಗಿ ಕಪ್ಪಾಗಲು ಮತ್ತು ಒಳಗೆ ಹೆಚ್ಚು ಬೇಗ ಫೇಡ್ ಬ್ಯಾಕ್ ಆಗುವಂತೆ ಮಾಡಲು ವಿನ್ಯಾಸಗೊಳಿಸಲಾಗಿ. ಜೊತೆಗೆ ಹಾನಿಕಾರಕ ಬ್ಲೂ ಲೈಟ್ ಮತ್ತು ಅಲ್ಟ್ರಾವಯೋಲೆಟ್ (ಯುವಿ) ಕಿರಣಗಳಿಂದ ರಕ್ಷಣೆಯೂ ಒದಗಿಸುತ್ತದೆ.
ಇದನ್ನೂ ಓದಿ: Bigg Boss ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ‘ಗಿಲ್ಲಿ’
ದಿನವಿಡೀ ಉತ್ತಮ ದೃಷ್ಟಿ ಭಾಗ್ಯ: ಝೈಸ್ (ZಇISS) ಫೋಟೋಫ್ಯೂಷನ್‌ಲ ಎಕ್ಸ್ ಲೆನ್ಸ್ ತಂತ್ರಜ್ಞಾನವು ಬದಲಾಗುತ್ತಿರುವ ಬೆಳಕಿನ ಪರಿಸ್ಥಿತಿಗಳಿಗೆ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತದೆ. ಇದರಿಂದ ನಿಮ್ಮ ಸಾಮಾನ್ಯ ಕನ್ನಡಕ ಮತ್ತು ಸನ್ ಗ್ಲಾಸ್ ಗಳನ್ನು ಪದೇ ಪದೇ ಬದಲಾಯಿಸುವ ಅಗತ್ಯ ಬೀಳುವುದಿಲ್ಲ, ಬದಲಿಗೆ ಒಳಗಿನಿಂದ ಸ್ಪಷ್ಟತೆ ಮತ್ತು ಹೊರಗೆ ಸನ್‌ಗ್ಲಾಸ್ ನಂತೆಯೇ ಕಪ್ಪು ಬಣ್ಣ ಒದಗಿಸುತ್ತದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಟೈಟಾನ್ ಐ+ನ ಎನ್‌ಎಸ್ ರಾಘವನ್ ಅವರು, “ಜನರು ಪ್ರಪಂಚವನ್ನು ನೋಡುವ ಮತ್ತು ಕಾಣುವ ರೀತಿಯನ್ನು ನಿಜವಾಗಿಯೂ ಸುಧಾರಿಸುವ ಹೊಸತನವನ್ನು ಪರಿಚಯಿಸುವ ಮೂಲಕ ಕನ್ನಡಕ ವಿಭಾಗದಲ್ಲಿ ಮುಂಚೂಣಿಯಲ್ಲಿರುವುದು ಟೈಟಾನ್ ಐ+ನ ಉದ್ದೇಶ ಆಗಿದೆ. ಟೈಟಾನ್ ಐ+ಗೆ ಮಾತ್ರ ಮೀಸಲಾಗಿರುವ ಕಾರ್ಲ್ ಝೈಸ್‌ನ ‘ಟೈಟಾನ್ ವಿತ್ ಫೋಟೋಫ್ಯೂಷನ್ ಎಕ್ಸ್’ ತಂತ್ರಜ್ಞಾನದ ಪರಿಚಯವು ಈ ಉದ್ದೇಶಕ್ಕೆ ಪೂರಕವಾಗಿ ಮೂಡಿ ಬಂದಿದೆ. ಈ ಮೂಲಕ ಅತ್ಯಾಧುನಿಕ ಆಪ್ಟಿಕಲ್ ವಿಜ್ಞಾನವು ಭಾರತೀಯ ಗ್ರಾಹಕರ ಅಗತ್ಯಗಳ ಬಗ್ಗೆ ನಾವು ಹೊಂದಿರುವ ಆಳವಾದ ತಿಳುವಳಿಕೆಯ ಜೊತೆಗೆ ಬೆರೆತಂತಾಗಿದೆ. ಈ ಪಾಲುದಾರಿಕೆಯು ಉತ್ತಮ ಕಾರ್ಯನಿರ್ವಹಣೆ, ರಕ್ಷಣೆ ಮತ್ತು ಆಧುನಿಕ ಸ್ಟೈಲ್ ಅನ್ನು ಒದಗಿಸುವ ದೈನಂದಿನ ಬಳಕೆಯ ಕನ್ನಡಕ ವಿಭಾಗದಲ್ಲಿ ಹೊಸ ಮಾನದಂಡವನ್ನು ಹಾಕಿಕೊಡಲು ನಮಗೆ ಅವಕಾಶ ನೀಡುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಪಶ್ಚಿಮ ಘಟ್ಟದ ಧ್ವನಿ ಮೌನ: ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ
ಕಾರ್ಯಕ್ರಮದಲ್ಲಿ ಮಾತನಾಡಿದ ಝೈಸ್ ಇಂಡಿಯಾ ವಿಷನ್ ಕೇರ್‌ನ ರೋಹನ್ ಪೌಲ್, “ಅರ್ಥಪೂರ್ಣ ಆವಿಷ್ಕಾರಗಳ ಮೂಲಕ ಕಣ್ಣಿನ ಆರೋಗ್ಯ ಪಾಲನೆಗೆ ನೆರವು ಒದಗಿಸುವುದರ ಕಡೆಗೆ ನಾವು ಗಮನ ಹರಿಸಿದ್ದೇವೆ. ಇದೀಗ ಭಾರತದಾದ್ಯಂತ ಟೈಟಾನ್ ಐ+ ಸಂಗ್ರಹದಲ್ಲಿ ಝೈಸ್‌ನ ಫೋಟೋಫ್ಯೂಷನ್ ಎಕ್ಸ್‌ಲೆನ್ಸ್ ತಂತ್ರಜ್ಞಾನದ ಲಭ್ಯವಾಗಲಿದ್ದು, ಈ ಮೂಲಕ ಗ್ರಾಹಕರಿಗೆ ದೈನಂದಿನ ಬಳಕೆಗೆ ವಿನ್ಯಾಸಗೊಳಿಸಿದ ಫೋಟೋಕ್ರೋಮಿಕ್ ಲೆನ್ಸ್‌ಗಳನ್ನು ಸುಲಭವಾಗಿ ಒದಗಿಸಲಿದ್ದೇವೆ. ಈ ಕನ್ನಡಕಗಳು ಸಂಪೂರ್ಣ ಯುವಿ ರಕ್ಷಣೆ ಒದಗಿಸಲಿದೆ. ಭಾರತೀಯ ಗ್ರಾಹಕರ ದೈನಂದಿನ ಬಳಕೆಯ ಕನ್ನಡಕ ಆಯ್ಕೆಗಳಲ್ಲಿ ಸುಧಾರಿತ ದೃಷ್ಟಿ ರಕ್ಷಣೆಯನ್ನು ಒದಗಿಸುವ ವಿಚಾರದಲ್ಲಿ ಇದು ಮುಖ್ಯ ಹೆಜ್ಜೆಯಾಗಿದೆ” ಎಂದು ಹೇಳಿದರು.























