ಬೆಂಗಳೂರು: ರೋಲ್ಸ್ ರಾಯ್ಸ್ GCC ಉದ್ಘಾಟಿಸಿದ ಸಚಿವ ಎಂ ಬಿ ಪಾಟೀಲ

0
48

ಬೆಂಗಳೂರು: ಭಾರತದ ಏರೋಸ್ಪೇಸ್ ಮತ್ತು ಡಿಫೆನ್ಸ್ ಕೇಂದ್ರವಾಗಿರುವ ಕರ್ನಾಟಕ ತನ್ನ ಅಂತರಾಷ್ಟ್ರೀಯ ಹಾದಿಯನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಮಹತ್ವದ ಹೆಜ್ಜೆಯಾಗಿ, ಪ್ರಸಿದ್ಧ ಬ್ರಿಟಿಷ್ ಕಂಪನಿ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಪ್ರತಿಷ್ಠಿತ ರೋಲ್ಸ್‌-ರಾಯ್ಸ್‌ ಕಂಪನಿಯು ಸ್ಥಾಪಿಸಿರುವ ಅತ್ಯಾಧುನಿಕ ಜಾಗತಿಕ ಸಾಮರ್ಥ್ಯ ಮತ್ತು ನಾವೀನ್ಯತಾ ಕೇಂದ್ರವನ್ನು (ಜಿಸಿಸಿ) ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ. ಬಿ. ಪಾಟೀಲ್‌ ಅವರು “ರೋಲ್ಸ್ ರಾಯ್ಸ್ ನಂತಹ ಜಾಗತಿಕ ಸಂಸ್ಥೆ ಕರ್ನಾಟಕವನ್ನು ತನ್ನ ಪ್ರಮುಖ ತಾಣವಾಗಿ ಆರಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಇದು ಕರ್ನಾಟಕವನ್ನು ಭಾರತದ GCC ರಾಜಧಾನಿ ಹಾಗೂ ವಿಶ್ವದ ಟಾಪ್ 3 ಏರೋಸ್ಪೇಸ್ ಹಬ್‌ಗಳಲ್ಲಿ ಒಂದಾಗಿ ಮತ್ತಷ್ಟು ಬಲಪಡಿಸುತ್ತದೆ” ಎಂದು ಹೇಳಿದರು.

ಕರ್ನಾಟಕದ GCC ಸಾಮರ್ಥ್ಯ: ರಾಜ್ಯದ ವೈಮಾಂತರಿಕ್ಷ ಉದ್ಯಮ ವಲಯದ ಕಾರ್ಯ ಪರಿಸರವನ್ನು ಸೃಷ್ಟಿಸುವಲ್ಲಿ ರೋಲ್ಸ್‌ ರಾಯ್ಸ್‌ ಕಂಪನಿಯು ಮೊದಲಿನಿಂದಲೂ ಜತೆಯಾಗಿದೆ. ನೂತನ ಜಿಸಿಸಿ ಕೇಂದ್ರವು ಕಂಪನಿಯ ಪಾಲಿಗೆ ಇಂತಹ ಅತ್ಯಂತ ದೊಡ್ಡ ಮತ್ತು ಅತ್ಯಾಧುನಿಕ ಕೇಂದ್ರವಾಗಿದೆ. 400ಕ್ಕೂ ಹೆಚ್ಚು #CC ಗಳೊಂದಿಗೆ ಕರ್ನಾಟಕವು ಭಾರತದ GCC ರಾಜಧಾನಿ ಮಾತ್ರವಲ್ಲ, ಜಗತ್ತಿನ ಟಾಪ್ 3 ಏರೋಸ್ಪೇಸ್ ಕೇಂದ್ರಗಳಲ್ಲಿ ಒಂದಾಗಿದೆ. ಯುವಕರಿಗೆ ಅತ್ಯಾಧುನಿಕ ಕೌಶಲ್ಯಾಭಿವೃದ್ಧಿ ತರಬೇತಿ ಸಿಗುತ್ತಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSMEs) ಜಾಗತಿಕ ಸರಪಳಿಯಲ್ಲಿ ತಮ್ಮ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಇದು ಪ್ರೇರಣೆ ನೀಡುತ್ತಿದೆ.

ಸ್ವಾವಲಂಬಿ ಕರ್ನಾಟಕದ ದೃಷ್ಟಿಕೋನ: “ನಮ್ಮ ದೃಷ್ಟಿಕೋನ ಯಾವಾಗಲೂ ಜನಪ್ರಥಮ (People-first) ಆಗಿದೆ. ಪ್ರತಿಯೊಂದು ಜಾಗತಿಕ ಹೂಡಿಕೆ ಉತ್ತಮ ಗುಣಮಟ್ಟದ ಉದ್ಯೋಗಗಳು, ಕೌಶಲ್ಯ ಅಭಿವೃದ್ಧಿ ಅವಕಾಶಗಳು ಮತ್ತು MSME ಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಜೊತೆಗೆ, ನಾವು ಎಂಜಿನಿಯರಿಂಗ್ ಮಾತ್ರವಲ್ಲದೆ ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನವನ್ನೂ ಬೆಳೆಸುತ್ತಿದ್ದೇವೆ. ಇದರಿಂದ ನಿಜವಾದ ಸ್ವಾವಲಂಬಿ ಕರ್ನಾಟಕವನ್ನು ನಿರ್ಮಿಸಬಹುದು” ಎಂದರು.

ಸ್ವದೇಶಿ ಸ್ಟಾರ್ಟ್‌ಅಪ್‌ಗಳು: ಇವೆಲ್ಲ ಒಟ್ಟಾಗಿ ಕರ್ನಾಟಕವನ್ನು ವಿಶ್ವಮಟ್ಟದ ತಂತ್ರಜ್ಞಾನ ಕೇಂದ್ರವಾಗಿ ರೂಪಿಸುತ್ತಿವೆ.

Previous articleಸಂಪಾದಕೀಯ: ಮತ್ತೆ ಮುನ್ನೆಲೆಗೆ ಜಾತಿ ಸಮೀಕ್ಷೆ, ಜೇನುಗೂಡಿಗೆ ಮತ್ತೊಂದು ಕಲ್ಲು
Next articleಮೋದಿ ತಾಯಿ ಎಐ ವಿಡಿಯೋ ತೆಗೆಯಿರಿ: ಹೈಕೋರ್ಟ್

LEAVE A REPLY

Please enter your comment!
Please enter your name here