ಮುಂಬೈ: ಯುರೋಪಿಯನ್ ಒಕ್ಕೂಟ, ಯುನೈಟೆಡ್ ಕಿಂಗ್‌ಡಮ್ ಹಾಗೂ ಅಮೆರಿಕದಿಂದ ರಷ್ಯಾದ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಉತ್ಪನ್ನಗಳ ರಫ್ತು ಕುರಿತು ಘೋಷಿಸಲಾದ ಹೊಸ ನಿರ್ಬಂಧಗಳ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಕಂಪನಿಯ ವಕ್ತಾರರು ನೀಡಿದ ಹೇಳಿಕೆಯಲ್ಲಿ, “ನಾವು ಇತ್ತೀಚೆಗೆ ಪ್ರಕಟವಾದ ಈ ನಿರ್ಬಂಧಗಳನ್ನು ಗಮನಿಸಿದ್ದೇವೆ. ಹೊಸ ಅನುಸರಣೆ ಅವಶ್ಯಕತೆಗಳ ಪರಿಣಾಮವನ್ನು ರಿಲಯನ್ಸ್ ಪ್ರಸ್ತುತ ಮೌಲ್ಯಮಾಪನ ಮಾಡುತ್ತಿದೆ. ಯುರೋಪ್‌ಗೆ ಉತ್ಪನ್ನ ರಫ್ತು ಕುರಿತು ಯುರೋಪಿಯನ್ ಒಕ್ಕೂಟ ನೀಡಿದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ. ಭಾರತ ಸರ್ಕಾರದಿಂದ ಈ ವಿಷಯದಲ್ಲಿ ಬರುವ ಯಾವುದೇ ಮಾರ್ಗದರ್ಶನವನ್ನು ಕೂಡಾ ನಾವು ಶಿಸ್ತಿನಿಂದ ಅನುಸರಿಸುತ್ತೇವೆ,” ಎಂದು ತಿಳಿಸಿದ್ದಾರೆ.
ಅವರು ಮುಂದುವರೆದು, “ನಿರ್ಬಂಧಗಳು ಮತ್ತು ನಿಯಂತ್ರಣ ನಿಯಮಾವಳಿಗಳಿಗೆ ಬದ್ಧವಾಗಿರುವ ದೀರ್ಘಕಾಲದ ನಮ್ಮ ದಾಖಲೆಯನ್ನು ಕಾಪಾಡಿಕೊಳ್ಳಲು ಹಾಗೂ ಸಂಸ್ಕರಣಾ ಘಟಕಗಳಲ್ಲಿ ಅಗತ್ಯ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ರಿಲಯನ್ಸ್ ಸಂಪೂರ್ಣ ಬದ್ಧವಾಗಿದೆ,” ಎಂದು ಹೇಳಿದರು.
ಕಂಪನಿಯು ಪೂರೈಕೆದಾರರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡು, ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ತಕ್ಕಂತೆ ಒಪ್ಪಂದಗಳನ್ನು ಪರಿಷ್ಕರಿಸುವುದಾಗಿ ತಿಳಿಸಿದೆ. “ಯುರೋಪ್ ಸೇರಿದಂತೆ ದೇಶೀಯ ಮತ್ತು ರಫ್ತು ಬೇಡಿಕೆಯನ್ನು ಪೂರೈಸಲು ನಮ್ಮ ವೈವಿಧ್ಯಮಯ ಕಚ್ಚಾ ತೈಲ ಸೋರ್ಸಿಂಗ್ ತಂತ್ರವು ಮುಂದುವರಿಯುತ್ತದೆ,” ಎಂದು ರಿಲಯನ್ಸ್ ವಿಶ್ವಾಸ ವ್ಯಕ್ತಪಡಿಸಿದೆ.
























Your article helped me a lot, is there any more related content? Thanks! https://www.binance.com/ro/register?ref=HX1JLA6Z
Thanks for sharing. I read many of your blog posts, cool, your blog is very good.