ಜಿಯೋ: 2.78 ಲಕ್ಷ ಹೊಸ ಚಂದಾದಾರರ ಸೇರ್ಪಡೆ

0
1

ಬೆಂಗಳೂರು: ರಿಲಯನ್ಸ್ ಜಿಯೋ ನವೆಂಬರ್ 2025 ರಲ್ಲಿ ವೈರ್‌ಲೆಸ್ ಮತ್ತು ವೈರ್‌ಲೈನ್ ವಿಭಾಗಗಳಲ್ಲಿ ದೃಢವಾದ ಬೆಳವಣಿಗೆಯನ್ನು ದಾಖಲಿಸುವ ಮೂಲಕ ಕರ್ನಾಟಕದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದಲ್ಲಿ ಜಿಯೋ 2.78 ಲಕ್ಷ ಮೊಬೈಲ್ ಚಂದಾದಾರರ ನಿವ್ವಳ ಸೇರ್ಪಡೆಯನ್ನು ದಾಖಲಿಸಿದೆ. ಇದು ನವೆಂಬರ್ 2025ರ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ಅದರ ಒಟ್ಟು ಬಳಕೆದಾರರ ಸಂಖ್ಯೆಯನ್ನು 2.60 ಕೋಟಿಗೆ ಕೊಂಡೊಯ್ದಿದೆ. ಈ ಮೂಲಕ, ಜಿಯೋ ಮತ್ತೊಮ್ಮೆ ರಾಜ್ಯದ ಮೊಬೈಲ್ ವಿಭಾಗದಲ್ಲಿ ಅಗ್ರ ಲಾಭ ಗಳಿಸಿದ ಸ್ಥಾನವನ್ನು ಪಡೆದುಕೊಂಡಿದೆ.

ಕರ್ನಾಟಕದಲ್ಲಿ, ರಿಲಯನ್ಸ್ ಜಿಯೋ ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ (ಎಫ್ ಡಬ್ಲ್ಯೂಎ) ನಲ್ಲಿ ವೇಗವಾಗಿ ಬೆಳೆಯುತ್ತಿದೆ. ಜಿಯೋ ಏರ್ ಫೈಬರ್ ಸೇವೆಯು ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮುತ್ತಿದೆ. ನವೆಂಬರ್ 2025ರ ಟ್ರಾಯ್‌ನ ಇತ್ತೀಚಿನ ದತ್ತಾಂಶವು ಈ ಪ್ರದೇಶದಲ್ಲಿ ಜಿಯೋದ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತದೆ.

ಕರ್ನಾಟಕ ವೃತ್ತದಲ್ಲಿ ಸಕ್ರಿಯ ಜಿಯೋ ಏರ್ ಫೈಬರ್ ಚಂದಾದಾರರ ಸಂಖ್ಯೆ 2025ರ ನವೆಂಬರ್‌ನಲ್ಲಿ 3,93,430 ಕ್ಕೆ ಏರಿದೆ. ಇದು ಅಕ್ಟೋಬರ್‌ನಲ್ಲಿ 3,85,631 ರಷ್ಟು ಇತ್ತು. ಇದಕ್ಕೆ ಪ್ರತಿಯಾಗಿ, ಹತ್ತಿರದ ಪ್ರತಿಸ್ಪರ್ಧಿ ಭಾರ್ತಿ ಏರ್‌ಟೆಲ್ ಕೇವಲ 2,42,390 ಚಂದಾದಾರರನ್ನು ಹೊಂದಿದೆ.

ಜಿಯೋದ ಕ್ಷಿಪ್ರ ಎಫ್‌ಡಬ್ಲ್ಯೂಎ (FWA) ಜಾಲ ವಿಸ್ತರಣೆಯಿಂದ, ಸ್ಪರ್ಧಾತ್ಮಕ ಬೆಲೆ ಮತ್ತು ಡಿಜಿಟಲ್ ಕೊಡುಗೆಗಳು ಕರ್ನಾಟಕದಾದ್ಯಂತ ಮನೆ ಮತ್ತು ಉದ್ಯಮ ಸಂಪರ್ಕವನ್ನು ಮರುರೂಪಿಸುತ್ತಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಹೈಸ್ಪೀಡ್ ಇಂಟರ್ನೆಟ್‌ಗೆ ಬಲವಾದ ಬೇಡಿಕೆಯೊಂದಿಗೆ, ಜಿಯೋ ಏರ್‌ಫೈಬರ್ ಡಿಜಿಟಲ್ ಅಂತರವನ್ನು ಕಡಿಮೆ ಮಾಡುತ್ತಿದೆ.

ಜಿಯೋ ತನ್ನ ಎಫ್‌ಡಬ್ಲ್ಯೂಎ(FWA) ಹೆಜ್ಜೆಗುರುತನ್ನು ವಿಸ್ತರಿಸುವುದನ್ನು ಮತ್ತು ಮೌಲ್ಯವರ್ಧಿತ ಸೇವೆಗಳನ್ನು ಸಂಯೋಜಿಸುವುದನ್ನು ಮುಂದುವರಿಸುತ್ತಿದ್ದಂತೆ, ಕರ್ನಾಟಕದಲ್ಲಿ ಅದರ ನಾಯಕತ್ವವು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ. ಇದು ರಾಜ್ಯವನ್ನು ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಜಿಯೋದ ಡಿಜಿಟಲ್ ನಾಯಕತ್ವದ ಮಾದರಿಯನ್ನಾಗಿ ಮಾಡುತ್ತದೆ.

ಟ್ರಾಯ್ ಪ್ರಕಾರ, ಜಿಯೋ ಸೆಪ್ಟೆಂಬರ್ ಅಂತ್ಯದವರೆಗೆ 50 ಕೋಟಿಗೂ ಹೆಚ್ಚು ಗ್ರಾಹಕರು ಮತ್ತು 50.87% ಮಾರುಕಟ್ಟೆ ಪಾಲನ್ನು ಹೊಂದಿದೆ. ಏರ್ಟೆಲ್ 31 ಕೋಟಿಗೂ ಹೆಚ್ಚು ಮತ್ತು ವೋಡಾ-ಐಡಿಯಾ 12 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಏರ್ಟೆಲ್ ಶೇ.31.31ರಷ್ಟು ಮತ್ತು ವೋಡಾ-ಐಡಿಯಾ ಶೇ.12.73ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ 3.37% ಮಾರುಕಟ್ಟೆ ಪಾಲನ್ನು ಹೊಂದಿದೆ.

ಜಿಯೋ ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ (ಎಫ್ ಡಬ್ಲ್ಯೂಎ) ನಲ್ಲಿ ಒಟ್ಟು 76,46,142 ಲಕ್ಷ ಬ್ರಾಡ್ ಬ್ಯಾಂಡ್ ಗ್ರಾಹಕರು 73% ಕ್ಕೂ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದ್ದಾರೆ.

ರಾಷ್ಟ್ರೀಯ ವೇದಿಕೆಯಲ್ಲಿ, ಜಿಯೋ ಉದ್ಯಮದ ಬೆಳವಣಿಗೆಯ ಪಥವನ್ನು ನಿರ್ದೇಶಿಸುವುದನ್ನು ಮುಂದುವರಿಸಿತು. ನವೆಂಬರ್ 2025 ರಲ್ಲಿ 1.39 ಮಿಲಿಯನ್ ನಿವ್ವಳ ವೈರ್‌ಲೆಸ್ ಚಂದಾದಾರರನ್ನು ಸೇರಿಸಿದೆ. ಇದು ಉದ್ಯಮದಲ್ಲೇ ಅತ್ಯಧಿಕವಾಗಿದೆ. ಅದರ ಒಟ್ಟು ದೇಶೀಯ ವೈರ್‌ಲೆಸ್ ಚಂದಾದಾರರ ಸಂಖ್ಯೆಯನ್ನು 486.09 ಮಿಲಿಯನ್‌ಗೆ ಬಂದಿದೆ. ಈ ಕಾರ್ಯಕ್ಷಮತೆಯು ಜಿಯೋದ ಮಾರುಕಟ್ಟೆ ನಾಯಕತ್ವವನ್ನು ಬಲಪಡಿಸಿದೆ. ಏಕೆಂದರೆ ಅದು ಈಗ 41.41% ನಷ್ಟು ವೈರ್‌ಲೆಸ್ ಮಾರುಕಟ್ಟೆ ಪಾಲನ್ನು ಹೊಂದಿದೆ. ಇದಕ್ಕೆ ಪ್ರತಿಯಾಗಿ, ವೊಡಾಫೋನ್ ಐಡಿಯಾ ರಾಷ್ಟ್ರೀಯವಾಗಿ 1 ಮಿಲಿಯನ್‌ಗೂ ಹೆಚ್ಚು ಚಂದಾದಾರರನ್ನು ಕಳೆದುಕೊಂಡರೆ, ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸರಿಸುಮಾರು 4 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಸೇರಿಸಿದೆ.

ಜಿಯೋದ ರಾಷ್ಟ್ರೀಯ ಪ್ರಾಬಲ್ಯವು ಮೊಬೈಲ್ ಧ್ವನಿ ಸೇವೆಗಳನ್ನು ಮೀರಿ ಹೈಸ್ಪೀಡ್ ಬ್ರಾಡ್ ಬ್ಯಾಂಡ್.ಗೆ ವಿಸ್ತರಿಸಿದೆ. ಇದು 510.52 ಮಿಲಿಯನ್ ಚಂದಾದಾರರನ್ನು ಹೊಂದಿರುವ ಒಟ್ಟು ಬ್ರಾಡ್ ಬ್ಯಾಂಡ್ ವಿಭಾಗದಲ್ಲಿ (ವೈರ್ಡ್ + ವೈರ್ ಲೆಸ್) ನಾಯಕನಾಗಿ ಉಳಿದಿದೆ. ಇದು 50.87% ಮಾರುಕಟ್ಟೆ ಪಾಲನ್ನು ಹೊಂದಿದೆ. ಕಂಪನಿಯು ನವೆಂಬರ್ ನಲ್ಲಿ 1,70,492 ವೈರ್ ಲೈನ್ ಚಂದಾದಾರರನ್ನು ಸೇರಿಸಿದೆ, ಇದು ಎಲ್ಲಾ ಆಪರೇಟರ್ ಗಳಲ್ಲಿ ಅತ್ಯಧಿಕವಾಗಿದೆ. ರಾಷ್ಟ್ರೀಯವಾಗಿ, ಜಿಯೋ 5ಜಿ ಎಫ್‌ಡಬ್ಯುಎ ಬಳಕೆದಾರರ ಸಂಖ್ಯೆಯು ಶೇ 3.38ರಷ್ಟು ವೃದ್ಧಿಸಿ, 7.64 ಮಿಲಿಯನ್‌ಗೆ ತಲುಪಿದೆ.

Previous articleಕೊಪ್ಪಳ: ಸಚಿವ ವಿ.ಸೋಮಣ್ಣ ಮೇಲೆ ಚೇರ್ ತೂರಾಟ