Home Advertisement
Home ಕೃಷಿ/ವಾಣಿಜ್ಯ ಆಪಲ್ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಮ್ಯಾಕ್‌ಬುಕ್ ಮತ್ತು ಐಫೋನ್ ಮೇಲೆ ಭರ್ಜರಿ ವೀಕೆಂಡ್ ಆಫರ್!

ಆಪಲ್ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಮ್ಯಾಕ್‌ಬುಕ್ ಮತ್ತು ಐಫೋನ್ ಮೇಲೆ ಭರ್ಜರಿ ವೀಕೆಂಡ್ ಆಫರ್!

0
30

ಆಪಲ್ ಕಂಪನಿ ತನ್ನ 50ನೇ ವಾರ್ಷಿಕೋತ್ಸವದ ಅಂಗವಾಗಿ ಭಾರತದಲ್ಲಿ ವಿಶೇಷ ಸೀಮಿತ ಅವಧಿಯ ಸೇಲ್ ಘೋಷಿಸಿದೆ. ಈ ಆಫರ್‌ಗಳು ಐಫೋನ್ 17 ಸೀರಿಸ್, ಮ್ಯಾಕ್‌ಬುಕ್ ಏರ್, ಮ್ಯಾಕ್‌ಬುಕ್ ಪ್ರೋ, ಆಪಲ್ ವಾಚ್, ಏರ್‌ಪಾಡ್ಸ್ ಹಾಗೂ ಐಪ್ಯಾಡ್‌ಗಳ ಮೇಲೆ ಲಭ್ಯವಿದೆ.

ಮೊದಲು ಮ್ಯಾಕ್‌ಬುಕ್ ಬಗ್ಗೆ ನೋಡೋದಾದರೆ 13 ಇಂಚಿನ ಮ್ಯಾಕ್‌ಬುಕ್ ಏರ್ (M5 ಚಿಪ್) ಈಗ ₹7,000 ರಷ್ಟು ಕಡಿತಗೊಂಡಿದ್ದು, ಇದರ ಬೆಲೆ ₹1,19,900 ರಿಂದ ₹1,12,900 ಕ್ಕೆ ಇಳಿದಿದೆ. ಹಾಗೆಯೇ 14 ಇಂಚಿನ ಮ್ಯಾಕ್‌ಬುಕ್ ಪ್ರೋ ₹10,000 ರಷ್ಟು ಕಡಿತದೊಂದಿಗೆ ₹1,79,900 ಕ್ಕೆ ಲಭ್ಯವಿದೆ. 16 ಇಂಚಿನ ಮ್ಯಾಕ್‌ಬುಕ್ ಪ್ರೋ ಕೂಡ ₹10,000 ರಷ್ಟು ಕಡಿತಗೊಂಡು ₹2,89,900 ಕ್ಕೆ ಸಿಗುತ್ತಿದೆ.

ಇನ್ನು ಐಫೋನ್ 17 ಸೀರಿಸ್ ಬಗ್ಗೆ ನೋಡಿದರೆ, ಐಫೋನ್ 17 ಪ್ರೋ ಮತ್ತು ಪ್ರೋ ಮ್ಯಾಕ್ಸ್ ಮೇಲೆ ₹5,000 ಕ್ಯಾಶ್‌ಬ್ಯಾಕ್ ಸಿಗುತ್ತಿದೆ. ಇದರಿಂದ ಐಫೋನ್ 17 ಪ್ರೋ ಬೆಲೆ ₹1,34,900 ರಿಂದ ₹1,29,900 ಕ್ಕೆ ಇಳಿಯುತ್ತದೆ. ಬೇಸ್ ಮಾದರಿಯ ಐಫೋನ್ 17 ಮೇಲೆ ನೇರ ಡಿಸ್ಕೌಂಟ್ ಇಲ್ಲದಿದ್ದರೂ, ಬೇರೆ ರಿಟೇಲ್ ಅಂಗಡಿಗಳಲ್ಲಿ ಬ್ಯಾಂಕ್ ಆಫರ್ ಮತ್ತು ಎಕ್ಸ್ಚೇಂಜ್ ಮೂಲಕ ಕಡಿಮೆ ಬೆಲೆಯಲ್ಲಿ ಪಡೆಯಬಹುದು. ಹಳೆಯ ಮಾದರಿಗಳಾದ ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಮೇಲೆ ₹4,000 ಕ್ಯಾಶ್‌ಬ್ಯಾಕ್ ಇದೆ.

ಇತರೆ ಉತ್ಪನ್ನಗಳ ಬಗ್ಗೆ ತಿಳಿಯೋದಾದರೆ, ಆಪಲ್ ವಾಚ್ ಸೀರಿಸ್ 11 ಮೇಲೆ ₹4,000 ಕಡಿತ ಇದೆ, ಮತ್ತು ಆಪಲ್ ವಾಚ್ SE 3 ಮೇಲೆ ₹2,000 ರಷ್ಟು ಕಡಿತ ಸಿಗುತ್ತದೆ. ಏರ್‌ಪಾಡ್ಸ್ ಪ್ರೋ (3ನೇ ತಲೆಮಾರಿನ) ಮತ್ತು ಏರ್‌ಪಾಡ್ಸ್ 4 ಮೇಲೆ ₹1,000 ರಷ್ಟು ಕಡಿತ ನೀಡಲಾಗಿದೆ. ಐಪ್ಯಾಡ್ ಏರ್ ಮೇಲೆ ₹4,000 ಕ್ಯಾಶ್‌ಬ್ಯಾಕ್ ಇದ್ದು, ಸಾಮಾನ್ಯ ಐಪ್ಯಾಡ್ ಮತ್ತು ಐಪ್ಯಾಡ್ ಮಿನಿ ಮೇಲೆ ₹3,000 ವರೆಗೆ ಕಡಿತ ಲಭ್ಯವಿದೆ.

ಈ ಆಫರ್‌ಗಳನ್ನು ಪಡೆಯಲು ಗ್ರಾಹಕರು ಆಪಲ್‌ನ ಅಧಿಕೃತ ವೆಬ್‌ಸೈಟ್ ಅಥವಾ ಇಮ್ಯಾಜಿನ್ ಸ್ಟೋರ್ನಂತಹ ಅಧಿಕೃತ ಮಾರಾಟಗಾರರನ್ನು ಸಂಪರ್ಕಿಸಬಹುದು. ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಅಮೇರಿಕನ್ ಎಕ್ಸ್ ಪ್ರೆಸ್ ಕಾರ್ಡ್ ಬಳಸಿ ಪಾವತಿ ಮಾಡಿದರೆ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಜೊತೆಗೆ ಎಕ್ಸ್ಚೇಂಜ್ ಆಫರ್ ಹಾಗೂ ಇತರ ವಿಶೇಷ ರಿಯಾಯಿತಿಗಳಿಂದ ಹೆಚ್ಚುವರಿ ಉಳಿತಾಯ ಮಾಡಬಹುದು.

ಒಟ್ಟಿನಲ್ಲಿ, ಈ 50ನೇ ವಾರ್ಷಿಕೋತ್ಸವದ ಸೇಲ್ ಆಪಲ್ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಒಳ್ಳೆಯ ಅವಕಾಶವಾಗಿದೆ.