ಬೆಂಗಳೂರು: ಚಿನ್ನದ ಬೆಲೆ ಇಂದು ಮತ್ತೇ ಇಳಿಕೆ ಕಂಡಿದೆ. ಕಳೆದ ನಾಲ್ಕು ದಿನಗಳಿಂದ ವೇಗವಾಗಿ ಏರುತ್ತಲೇ ಇದ್ದ ಚಿನ್ನ ಮತ್ತು ಬೆಳ್ಳಿ ಭಾನುವಾರ ಇಳಿಕೆ ಕಂಡಿದ್ದು, ಇಂದು ಕೂಡ ಬೆಲೆಯಲ್ಲಿ ಕುಸಿತವಾಗಿದೆ.
ಬಜೆಟ್ ಮಂಡನೆಗೂ ಮುನ್ನವೇ ಚಿನ್ನ, ಬೆಳ್ಳಿಯಲ್ಲಿ ಕುಸಿತವಾಗಿತ್ತು. ವಾರದ ಮೊದಲ ದಿನವೇ ಚಿನ್ನದ ಮತ್ತೆ ಕುಸಿತವಾಗಿದೆ. 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 830 ರೂ. ಕುಸಿತವಾಗಿದ್ದು, 13,890 ರೂಪಾಯಿಗಳಾಗಿವೆ. 24 ಕ್ಯಾರಟ್ ಪ್ರತಿ ಗ್ರಾಂಗೆ 905 ರೂಪಾಯಿ ಕುಸಿತವಾಗಿದ್ದು, 15,153 ರೂ. ಆಗಿದೆ.
ನಾಲ್ಕು ದಿನಗಳ ಹಿಂದಿನ ಚಿನ್ನದ ಬೆಲೆಗೆ ಹೋಲಿಸಿದರೆ, ಇಂದಿನ ಬೆಲೆಗೆ ಪ್ರತಿ ಗ್ರಾಂಗೆ 2,732 ರೂಪಾಯಿ, ಪ್ರತಿ 10 ಗ್ರಾಮ್‌ಗೆ 27,320 ರೂ.ಗಳಷ್ಟು ಇಳಿಕೆಯಾಗಿದೆ. ಇನ್ನು ಬೆಳ್ಳಿ ದರದಲ್ಲಿಯೂ ಗಣನೀಯ ಇಳಿಕೆಯಾಗಿದೆ.
ಬೆಳ್ಳಿ ಬೆಲೆಯಲ್ಲಿಯೂ ಗಮನಾರ್ಹ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 50,000 ರೂ.ಗಳಷ್ಟು ಕುಸಿತವಾಗಿದೆ. ಕಳೆದ ಒಂದು ವರ್ಷದಿಂದ ದಾಖಲೆ ಮೇಲೆ ದಾಖಲೆ ಬರೆದುಕೊಂಡಿದ್ದ ಬೆಳ್ಳಿ ಗಮನಾರ್ಹ ಕುಸಿತವನ್ನು ಕಂಡಿದೆ. ಸದ್ಯ ಕೆಜಿ ಬೆಳ್ಳಿಗೆ 3 ಲಕ್ಷ ರೂಪಾಯಿ ಆಗಿದೆ.









