ಬೆಂಗಳೂರು: ಚಿನ್ನ ಖರೀದಿ ಮಾಡಬೇಕು ಎಂದು ಕಾದುಕುಳಿತವರಿಗೆ ಮತ್ತೇ ಶಾಕ್! ಬಂಗಾರದ ಬೆಲೆ ಮತ್ತೆ ಹೆಚ್ಚಳ ಆಗಿದೆ. ವಾರದ ಮೊದಲ ದಿನವೇ ಚಿನ್ನ ಭರ್ಜರಿ ಏರಿಕೆ ಕಂಡಿದೆ.
24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 82 ರೂ.ಗಳಷ್ಟು ಹೆಚ್ಚಾದರೆ, 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 75 ರೂ. ಹೆಚ್ಚಾಗಿದೆ. ಈ ಮೂಲಕ 22 ಕ್ಯಾರಟ್‌ನ 1 ಗ್ರಾಂ ಬಂಗಾರದ ಬೆಲೆ 12,350 ರೂ. ತಲುಪಿದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನ 13,473 ರೂ. ತಲುಪಿದೆ.
ಚಿನ್ನದ ದರದೊಂದಿಗೆ ಬೆಳ್ಳಿ ದರದಲ್ಲಿಯೂ ಹೆಚ್ಚಳವಾಗಿದೆ. ಬೆಳ್ಳಿ ಅಂತೂ ಚಿನ್ನಕ್ಕಿಂತ ಜೋರಾಗಿ ಏರಿಕೆಯಾಗಿತ್ತಿದೆ. 28 ಡಾಲರ್‌ನಿಂದ ಆರಂಭವಾಗಿ 62 ಡಾಲರ್ ತಲುಪಿದೆ. 1 ಗ್ರಾಂ ಬೆಳ್ಳಿಗೆ 200.90 ರೂ. ಆಗಿದ್ದು, 1 ಕೆಜಿ ಬೆಳ್ಳಿಗೆ 2,00,900 ರೂ. ಪಾವತಿಸಬೇಕಾಗಿದೆ.
ಇದನ್ನೂ ಓದಿ: ಸುಡುಬಿಸಿಲಲ್ಲೂ ಎಸ್ಸೆಸ್ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ
24 ಕ್ಯಾರೆಟ್ ಚಿನ್ನದ ಬೆಲೆ ಭಾನುವಾರ ಪ್ರತಿ ಗ್ರಾಂ 13,391 ರೂ. ಆಗಿತ್ತು. ಸೋಮವಾರ 82 ರೂ. ಏರಿಕೆಯಾಗಿದ್ದು 13,473 ರೂ. ಗಳಿಗೆ ತಲುಪಿದೆ. ಹೀಗಾಗಿ 10 ಗ್ರಾಂ ಬಂಗಾರ ಬೆಲೆಯಲ್ಲಿ ಒಟ್ಟು 820 ರೂ. ಏರಿಕೆಯಾಗಿದ್ದು, 1,34,730 ರೂ.ಗೆ ಮಾರಾಟವಾಗುತ್ತಿದೆ.
ಆಭರಣ ಬಂಗಾರ 22 ಕ್ಯಾರೆಟ್ ಚಿನ್ನದ ಬೆಲೆ ಭಾನುವಾರ ಪ್ರತಿ ಗ್ರಾಂ 12,275 ರೂ. ಆಗಿತ್ತು. ಸೋಮವಾರ ಪ್ರತಿ ಗ್ರಾಂಗೆ 75 ರೂ. ಏರಿಕೆಯಾಗಿದ್ದು, 12,350 ರೂ. ಗಳಿಗೆ ತಲುಪಿದೆ. ಹೀಗಾಗಿ 10 ಗ್ರಾಂ ಬಂಗಾರ ಬೆಲೆಯಲ್ಲಿ ಒಟ್ಟು 750 ರೂ ಏರಿಕೆಯಾಗಿದ್ದು, 1,23,500 ರೂ. ಗೆ ಮಾರಾಟವಾಗುತ್ತಿದೆ.
ಬೆಳ್ಳಿ ಪ್ರತಿ ಗ್ರಾಂ 198 ರೂ. ನಿಂದ 200.90 ರೂ. ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿಯ ಬೆಲೆ 2,009 ರೂ. ಗಳಾಗಿದ್ದು ಭಾನುವಾರದ ಬೆಲೆಗಿಂತ 29 ರೂ. ಹೆಚ್ಚಳ ಕಂಡಿದೆ.
ಇಂದಿನ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರೆಟ್ನ 1 ಗ್ರಾಂ ಬಂಗಾರದ ಬೆಲೆ: 13,473 ರೂ.
22 ಕ್ಯಾರೆಟ್ನ 1 ಗ್ರಾಂ ಬಂಗಾರದ ಬೆಲೆ: 12,350 ರೂ.
ಬೆಳ್ಳಿ ಬೆಲೆ 1 ಗ್ರಾಂಗೆ: 201 ರೂ.























