ಮರಕ್ಕೆ ಕಟ್ಟಿದ ಪ್ಲಾಸ್ಟಿಕ್ ಕವರ್‌ನಲ್ಲಿ ಹಸುಗೂಸು

0
17

ಬೆಳಗಾವಿ: ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಮರಕ್ಕೆ ತೂಗು ಹಾಕಿದ್ದ ಹಸುಗೂಸೊಂದು ಖಾನಾಪುರದಲ್ಲಿ ಪತ್ತೆಯಾಗಿದೆ.
ಖಾನಾಪುರ ತಾಲೂಕಿನ ಅಶೋಕ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನೇರಸಾ ಗೌಳಿವಾಡದಲ್ಲಿ ಈ ಪ್ರದೇಶದ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿಯವರಿಗೆ ಮಗು ಕಂಡುಬಂದಿದೆ. ತಕ್ಷಣ ಅವರು ಸ್ಥಳೀಯ ಗ್ರಾಮ ಪಂಚಾಯಿತಿಗೆ ವಿಷಯ ತಿಳಿಸಿದ್ದಾರೆ. ನಂತರ ಖಾನಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು ಮಗುವಿಗೆ ಆರೈಕೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್‌ಗೆ ಕಳುಹಿಸಿದ್ದಾರೆ.
ಸುಮಾರು 2.5 ಕಿಲೋ ತೂಕದ ಗಂಡುಮಗು ಆರೋಗ್ಯವಾಗಿದ್ದು, ಕವರ್‌ನಲ್ಲಿ ಕಟ್ಟಿ ತೂಗಿಸಿದ ಹಿನ್ನೆಲೆಯಲ್ಲಿ ಒಂದಿಷ್ಟು ಉಸಿರಾಟದ ತೊಂದರೆ ಅನುಭವಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಬೆಳಗಾವಿಯ ದಾದಿಯರ ಆರೈಕೆಯಲ್ಲಿದೆ. ಸದ್ಯ ಮಗುವಿನ ಪೋಷಕರ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.

ಹಸುಗೂಸು
Previous articleಸುಪ್ರೀಂ ಸಿಜೆ ಎನ್.ವಿ ರಮಣ ಇಂದು ನಿವೃತ್ತಿ
Next articleಸಕ್ರೆಬೈಲು ಆನೆಗಳಿಗಾಗಿ ಮುತಗಾ ರೈತರ ಕಬ್ಬು ಕಳವು