ಬೀದಿ ರಂಪ ಮಾಡುವ ರಾಜಕಾರಣಿಗಳನ್ನು ಜೈಲಿಗೆ ಹಾಕಿ

0
9

ಚಿತ್ರದುರ್ಗ: ರಾಜಕಾರಣ ಎಂದರೆ ಅರ್ಥ ಗೊತ್ತಿಲ್ಲದೆ ಹಾದಿ ರಂಪ ಬೀದಿ ರಂಪ ಮಾಡುವ ಚುನಾಯಿತ ಪ್ರತಿನಿಧಿಗಳನ್ನು ಜೈಲಿಗೆ ಹಾಕುವಂತೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾಪಟೇಲ್ ಹೇಳಿದರು.
ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಮಾತಿನ ಸಮರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಇವರುಗಳು ಇಲ್ಲಿ ಇರಲು ಅರ್ಹರಲ್ಲ ಜೈಲಿನಲ್ಲಿರುವುದು ಸೂಕ್ತ ಏಕೆಂದರೆ ಕ್ರಿಮಿನಲ್‌ಗಳಂತೆ ಮಾತನಾಡುವರು ಜೈಲಿನಲ್ಲಿರಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜಕಾರಣ ಎಂದರೆ ಸೇವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಬಂಡವಾಳ ಹಾಕಿ ಬಂಡವಾಳ ತೆಗೆಯುವ ಉದ್ಯಮ ಅಲ್ಲ. ಇದೊಂದು ರಾಜಕೀಯ ಸೇವೆಯಾಗಿ ಪರಿಗಣಿಸಬೇಕು. ನಮ್ಮ ತಂದೆ ಸಹ ಚುನಾವಣೆ ಮುಗಿದ ಮೇಲೆ ಬೇಸಾಯ ಮಾಡುವಂತೆ ಹೇಳುತ್ತಿದ್ದರು. ಈಗ ಅದು ಇಲ್ಲವಾಗಿದೆ. ರಾಜಕಾರಣ ಉದ್ಯಮವಾಗಬಾರದು ಎಂದರು.

Previous articleಸಹೋದರನಿಗೆ ಚನ್ನಗಿರಿ: ದಾವಣಗೆರೆ ಲೋಕಸಭೆಯಲ್ಲಿ ಸ್ಫರ್ಧೆ
Next articleಖರ್ಗೆ ನೇತೃತ್ವದಲ್ಲಿ ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ