ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಶ್ರೀರಾಮ ಮತ್ತು ಸೀತೆಯ ವಿಗ್ರಹಗಳಿಗಾಗಿ ನೇಪಾಳದಿಂದ ತರಿಸಲಾಗಿರುವ ಎರಡು ಸಾಲಿಗ್ರಾಮ ಶಿಲೆಗಳು ಇಂದು ಗುರುವಾರ ಅಯೋಧ್ಯೆ ತಲುಪಿವೆ.
ಎರಡು ಸಾಲಿಗ್ರಾಮ ಶಿಲೆಗಳು ನೇಪಾಳದ ಕಾಳಿ ಗಂಡಕಿ ನದಿಯ ಜಲಪಾತವೊಂದರಿಂದ ಆಯ್ದುಕೊಂಡು ಬರಲಾಗಿದೆ. ಕೆಲವು ದೇವಸ್ಥಾನಗಳಲ್ಲಿ ವಿಷ್ಣು ದೇವರ ಅಮೂರ್ತ ರೂಪದ ವಿಗ್ರಹಗಳನ್ನು ಸಾಲಿಗ್ರಾಮ ಶಿಲೆಗಳಿಂದಲೇ ಕಡೆಯಲಾಗಿರುತ್ತದೆ. ಈಗ ತಂದಿರುವ ಎರಡು ಕಲ್ಲುಗಳಲ್ಲಿ ಒಂದು ಕಲ್ಲು 26 ಟನ್ನದ್ದಾದರೆ ಮತ್ತೊಂದು ಕಲ್ಲು 14 ಟನ್ ತೂಗುತ್ತದೆ. ರಾಮನ ಮೂರ್ತಿ 5.5 ಅಡಿ ಇರಲಿದ್ದು, ಇಂದಿನಿಂದಲೇ ವಿಗ್ರಹ ಕೆತ್ತನೆ ನಡೆಯಲಿದೆ.






















