Home Advertisement
Home ಸಿನಿ ಮಿಲ್ಸ್ “ಇದು ನನ್ನ ಹೃದಯದ ಮಿಡಿತ”: ‘ಟಾಪ್ ನಾಚ್ ಸುಂದರಿ’ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ನಟ...

“ಇದು ನನ್ನ ಹೃದಯದ ಮಿಡಿತ”: ‘ಟಾಪ್ ನಾಚ್ ಸುಂದರಿ’ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ನಟ ಯಶವಂತ್

0
39

ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ನಟ ಯಶವಂತ್ ಅಭಿನಯದ ‘ಟಾಪ್ ನಾಚ್ ಸುಂದರಿ’ ಆಲ್ಬಂ ಹಾಡಿನ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಈ ಮೂಲಕ ಯಶವಂತ್ ಬಹುಕಾಲದ ಕನಸೊಂದು ನನಸಾಗುವತ್ತ ಮೊದಲ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಅಧ್ಯಕ್ಷರಾದ ಡಾ. ಜಯಮಾಲಾ ಹಾಗೂ ಹಿರಿಯ ನಟ ಸುಂದರ್ ರಾಜ್ ಈ ಹಾಡಿನ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಯಮಾಲಾ, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಇಂತಹ ಪ್ರಯತ್ನಗಳು ಕನ್ನಡ ಕಲಾ ಲೋಕಕ್ಕೆ ಅಗತ್ಯ ಎಂದು ತಂಡಕ್ಕೆ ಶುಭ ಹಾರೈಸಿದರು.

ತಮ್ಮ ಚೊಚ್ಚಲ ದೊಡ್ಡ ಪ್ರಯತ್ನದ ಬಗ್ಗೆ ಮಾತನಾಡಿದ ಯಶವಂತ್, “ಇದು ಕೇವಲ ಒಂದು ಹಾಡಲ್ಲ, ನನ್ನ ವರ್ಷಗಳ ಪರಿಶ್ರಮದ ಫಲ ಮತ್ತು ನನ್ನ ಹೃದಯದ ಮಿಡಿತ. ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಬೇಕೆಂಬ ಹಂಬಲದಿಂದ ಹಲವು ವರ್ಷಗಳ ಕಾಲ ಶ್ರಮ ಹಾಕಿದ್ದೇನೆ. ಇಂದು ಹಿರಿಯರ ಸಮ್ಮುಖದಲ್ಲಿ ಫಸ್ಟ್ ಲುಕ್ ಬಿಡುಗಡೆಯಾಗಿರುವುದು ಅತೀವ ಸಂತಸ ತಂದಿದೆ. ಈ ಪ್ರಯಾಣದಲ್ಲಿ ನನಗೆ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಚಿರಋಣಿ,” ಎಂದು ಭಾವುಕರಾಗಿ ನುಡಿದರು.

‘ಯಶ್ ಮ್ಯೂಸಿಕ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಹಾಡಿಗೆ ಸುದರ್ಶನ್ ಆಕ್ಷನ್ ಕಟ್ ಹೇಳಿದ್ದಾರೆ. ನಟ ಯಶವಂತ್‌ಗೆ ಜೋಡಿಯಾಗಿ ಪ್ರಕೃತಿ ರಾಜೇಂದ್ರ ಹೆಜ್ಜೆ ಹಾಕಿದ್ದಾರೆ. ತಾಂತ್ರಿಕವಾಗಿ ಈ ಹಾಡು ಸಾಕಷ್ಟು ಶ್ರೀಮಂತವಾಗಿದ್ದು, ವಿನೀತ್ ಸಂಗೀತ ಸಂಯೋಜನೆ ಹಾಗೂ ದಿನೇಶ್ ಲಕ್ಕಿ ಸಾಹಿತ್ಯ ಹಾಡಿನ ಮೆರುಗನ್ನು ಹೆಚ್ಚಿಸಿದೆ.

ವಿಶೇಷವೆಂದರೆ ಖ್ಯಾತ ನೃತ್ಯ ನಿರ್ದೇಶಕ ರಾಮ್ ಚರಣ್ ನೃತ್ಯ ನಿರ್ದೇಶನ ಹಾಗೂ ಸುಹಾಸ್ ಅಮೀನ್ ಛಾಯಾಗ್ರಹಣ ಈ ಆಲ್ಬಂಗೆ ದೃಶ್ಯ ವೈಭವವನ್ನು ನೀಡಿದೆ. ಸದ್ಯ ಫಸ್ಟ್ ಲುಕ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ‘ಟಾಪ್ ನಾಚ್ ಸುಂದರಿ’ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಸಂಗೀತ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.