ಬೆಳಗಾವಿ ಯೋಧ ಹುತಾತ್ಮ

0
10

ಬೆಳಗಾವಿ: ಐಎಎಫ್ ಯುದ್ಧ ವಿಮಾನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಆರ್. ಸಾರಥಿ ಹುತಾತ್ಮರಾಗಿದ್ದಾರೆ. ಹನುಮಂತರಾವ್ ಬೆಳಗಾವಿಯ ಗಣೇಶಪುರದ ನಿವಾಸಿ. ಹನುಮಂತರಾವ್ ನಿವಾಸಕ್ಕೆ ಭಾರತೀಯ ಸೇನೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ನೀಡಿದ್ದಾರೆ. ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.
ಮಧ್ಯಪ್ರದೇಶದ ಮೊರೆನಾದಲ್ಲಿ ಇಂದು ಎರಡು ಜೆಟ್ ವಿಮಾನಗಳ ನಡುವೆ ಡಿಕ್ಕಿಯಾಗಿತ್ತು. ಸುಖೋಯ್-೩೦ ಹಾಗೂ ಮಿರಾಜ್-೨೦೦೦ ವಿಮಾನಗಳು ತಾಲೀಮು ನಡೆಸುತ್ತಿದ್ದ ವೇಳೆ ಪರಸ್ಪರ ಡಿಕ್ಕಿ ಹೊಡೆದು ಮೊರೆನಾ ಪ್ರದೇಶದಲ್ಲಿ ಪತನಗೊಂಡಿದ್ದವು.

Previous articleಮಹದಾಯಿ ನಮ್ಮ ಕೊಡುಗೆ
Next articleಅಮಿತ್ ಶಾ ಭೇಟಿ, ಸಂಚಲನ ಮೂಡಿಸಿದೆ: ಸಿಎಂ