ಉಗ್ರವಾದ ಪೋಷಿಸಿದ್ದೇ ಕಾಂಗ್ರೆಸ್..!

0
23

ಬೆಳಗಾವಿ(ಎಂ.ಕೆ. ಹುಬ್ಬಳ್ಳಿ): ಉಗ್ರವಾದವನ್ನು ಪೋಷಿಸುತ್ತ ಬಂದಿರುವ ಕಾಂಗ್ರೆಸನ್ನು ಬೇರು ಸಮೇತ ಕಿತ್ತೊಗೆಯುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಎಂ.ಕೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉಗ್ರವಾದಿಗಳ ಚಟುವಟಿಕೆಗಳು ಜೋರಾಗಿದ್ದವು, ಎಲ್ಲಿ ನೋಡಿದಲ್ಲಿ ಬಾಂಬ್‌ಗಳು ಬೀಳುತ್ತಿದ್ದವು, ಸುರಕ್ಷಿತ ಎನ್ನುವುದು ಇರಲಿಲ್ಲ. ಹೀಗಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ ಎಂದರು.
ಆದರೆ, ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಉಗ್ರವಾದಕ್ಕೆ ಕಡಿವಾಣ ಹಾಕಲಾಗಿದೆ. ಶಾಂತಿ ಸುವ್ಯವಸ್ಥೆ ನೆಲಸಿದೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ದೇಶ ಅಷ್ಟೇ ಅಲ್ಲ ರಾಜ್ಯದಲ್ಲಿಯೂ ನಿರಂತರವಾಗಿ ನಡೆಯುತ್ತಿವೆ ಎಂದರು

Previous articleಅಪಘಾತಕ್ಕೀಡಾದ ವಿದ್ಯಾರ್ಥಿಯ ನೇತ್ರದಾನ
Next articleಜೆಡಿಎಸ್ ಕಾಂಗ್ರೆಸ್‌ನ ಬಿ ಟೀಮ್: ಅಮಿತ್ ಶಾ