ದಂಪತಿ ಮೃತದೇಹ ಪತ್ತೆ

0
12

ಮಂಗಳೂರು: ನಗರದ ಬಿಜೈ ಸಮೀಪದ ಕಾಪಿಕಾಡ್ ನಾಲ್ಕನೇ ಕ್ರಾಸ್‌ನ ವಸತಿ ಸಮುಚ್ಛಯದಲ್ಲಿ ದಂಪತಿಗಳ ಶವ ಪತ್ತೆಯಾಗಿದೆ.
ಶೈಲಜಾ ರಾವ್ (೬೪) ಹಾಗೂ ಅವರ ಪತಿ ನಿವೃತ ಬ್ಯಾಂಕ್ ಅಧಿಕಾರಿ ದಿನೇಶ್ ರಾವ್ (೬೫) ಶವ ಪತ್ತೆಯಾಗಿದೆ. ಶೈಲಜಾ ರಾವ್ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದು, ನೋಡಿ ಕೊಳ್ಳಲು ಹೋಂ ನರ್ಸ್ ಬಂದು ಹೋಗುತ್ತಿದ್ದರು. ಮಕ್ಕಳು ಹೊರ ದೇಶದಲ್ಲಿ ಉದ್ಯೋಗದಲ್ಲಿದ್ದು, ಮನೆಯಲ್ಲಿ ದಂಪತಿಗಳು ಮಾತ್ರ ವಾಸವಾಗಿದ್ದಾರೆ.
ದಿನೇಶ್ ರಾವ್ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಶೈಲಜಾ ರಾವ್ ಮಲಗಿದಲ್ಲಿಯೇ ಸಾವನ್ನಪ್ಪಿದ್ದಾರೆ, ದಿನೇಶ್ ರಾವ್ ದೇಹ ಪಕ್ಕದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleವಾಜಪೇಯಿ ಮೃಗಾಲಯಕ್ಕೆ ಬಿಹಾರದ ಜಿರಾಫೆ
Next articleಭ್ರಷ್ಟಾಚಾರ ಆರೋಪ- ಮಂಗಳೂರು ಪೊಲೀಸ್ ಆಯುಕ್ತರಿಗೆ ಲೋಕಾಯುಕ್ತ ನೋಟಿಸ್