ಮಂತ್ರಾಲಯದ ಶ್ರೀರಾಯರ ಮಠದಲ್ಲಿ 3.14 ಕೋಟಿ ರೂಗಳು ಹುಂಡಿಯಲ್ಲಿ ಸಂಗ್ರಹ

0
25


ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ ಭಕ್ತರು ಹಾಕಿದ ಕಾಣಿಕೆ ಹಣ ಒಟ್ಟು 3.14 ಕೋಟಿ ರೂಪಾಯಿಗಳಷ್ಟು ಸಂಗ್ರಹವಾಗಿದೆ. ಶುಕ್ರವಾರ ಬೆಳಿಗ್ಗೆಯಿಂದ ಹುಂಡಿಯಲ್ಲಿನ ಕಾಣಿಕೆಯ ಹಣವನ್ನು ಸ್ವಯಂ ಸೇವಾ ಸಮಿತಿಯ ಕಾರ್ಯಕರ್ತರು ಎಣಿಕೆ ಕಾರ್ಯ ಆರಂಭಿಸಿದ್ದು, ಸಂಜೆ 4ಗಂಟೆಯವರೆಗೆ 3.14,98, 676 ರೂಪಾಯಿಗಳು ಎಣಿಕೆ ಮಾಡಲಾಗಿದ್ದು, ಇನ್ನೂ ನಾಣ್ಯಗಳ ಏಣಿಕೆ ಕಾರ್ಯವೂ ಮುಂದುವರೆದಿದೆ ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

Previous articleಜೀವನದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರಿ: ಜೋಶಿ
Next articleಅಮಿತ್ ಶಾ ರೋಡ್ ಶೋ: ಮಧುವಣಗಿತ್ತಿಯಂತೆ ಶೃಂಗಾರಗೊಂಡ ಕುಂದಗೋಳ