ಹುಬ್ಬಳ್ಳಿ : ಹೌದು ನಮ್ಮ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಮ್ಮ ಪಕ್ಷದ ಮುಖಂಡರ ಬಗ್ಗೆ ಟೀಕೆ ಮಾಡಿ ಮಾತನಾಡುತ್ತಿದ್ದರು. ಈಗ ಮೂರ್ನಾಲ್ಕು ದಿನದಿಂದ ಆ ರೀತಿ ಮಾತಾಡೋದು ನಿಲ್ಲಿಸಿದ್ದಾರೆ. ಇನ್ಮುಂದೆ ಅವರು ಆ ರೀತಿ ಮಾತಾಡೋದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣಸಿಂಗ್ ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ನಮ್ಮದೇ ಪಕ್ಷದ ಮುಖಂಡರುಗಳ ಬಗ್ಗೆ ಟೀಕೆ ಮಾಡಿದ್ದರ ಬಗ್ಗೆ ನೋಟಿಸ್ ನೀಡಿ , ಮಾತುಕತೆ ನಡೆಸಿ ತಿಳಿವಳಿಕೆ ನೀಡಿದ್ದೇವೆ. ಇನ್ನು ಮುಂದೆ ಮಾತನಾಡುವುದಿಲ್ಲ ಎಂದಿದ್ದಾರೆ. ಆ ಪ್ರಕಾರ ಮೂರ್ನಾಲ್ಕು ದಿನಗಳಿಂದ ಅವರು ಯಾವುದೇ ರೀತಿ ಮಾತನಾಡಿಲ್ಲ ಎಂದು ಹೇಳಿದರು.
ನಮ್ಮದು ಕಾಂಗ್ರೆಸ್ ತರಹ ಅಲ್ಲ. ಆಂತರಿಕ ಶಿಸ್ತಿಗೆ ಒತ್ತು ಕೊಡುತ್ತೇವೆ. ಸೌಜನ್ಯದ ಹದ್ದು ಮೀರಿದರೆ ತಿದ್ದಿ ಸರಿ ಮಾಡುತ್ತೇವೆ ಎಂದರು.
ಪಕ್ಷದ ಕಾರ್ಯಕ್ರಮ, ವೇದಿಕೆಗಳಲ್ಲು ಮಾಜಿ ಸಿಎಂ ಜಗದೀಶ ಶೆಟ್ಡರ, ಬಿ.ಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರುಣ ಸಿಂಗ್, ಪಕ್ಷದ ಹಿರಿಯ ನಾಯಕರನ್ನು ಯಾವತ್ತೂ ಕಡಿಎಗಣಿಸಿಲ್ಲ ಎಂದು ಉತ್ತರಿಸಿದರು. ಕಡೆಗಣಿಸುವ ಪ್ರಶ್ನೆಯೇ ಇಲ್ಳ ಎಂದರು.