ಬಿಜೆಪಿಗೆ ಅಭಿವೃದ್ಧಿ ಎಂಬುವುದೇ ಗೊತ್ತಿಲ್ಲ: ಅಬ್ಬಯ್ಯ

0
29
ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ: ಬರೀ ಸುಳ್ಳುಗಳನ್ನು ಹೇಳಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಅವರಿಗೆ ಅಭಿವೃದ್ಧಿ ಎಂಬುವುದೇ ಗೊತ್ತಿಲ್ಲ. ಜಾತಿ-ಧರ್ಮಗಳ ಮತಗಳನ್ನ ಪಡೆಯೋದು ಗೊತ್ತಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಕಿಡಿ ಕಾರಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ಕೆಲ ಬಿಜೆಪಿಯವರು ಪ್ರತಿಭಟನೆ ಮಾಡಿದ್ದಾರೆ. ಅವರಿಂದ ನಾನು ಪ್ರಮಾಣ ಪತ್ರ ಪಡೆಯುವ ಅಗತ್ಯವಿಲ್ಲ. ಜನ ನನಗೆ ಅಂಕಗಳನ್ನು ಕೊಟ್ಟರೆ ಸಾಕು ಎಂದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿಯವರು ಹಲವು ಆರೋಪಗಳನ್ನು ಮಾಡಿದ್ದಾರೆ. ತಾವು ಈ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾದವರು. ಶಾಸಕರಾಗಿ ಆಯ್ಕೆಯಾದ ಐದು ರ್ಷಗಳ ಕಾಲ ನಿದ್ದೆ ಮಾಡಿ ಮನೆಗೆ ಹೋಗಿದ್ದೀರಿ. ಇದೀಗ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಕೆಲಸ ಮಾಡುತ್ತಿದ್ದೀರಿ. ಶಾಸಕರಾಗಿ ಕೆಲಸ ಮಾಡಿರುವ ನೀವು ಆರೋಪ ಮಾಡುವ ಮುನ್ನ ಆಧಾರಗಳನ್ನು ಇಟ್ಟುಕೊಂಡು ಮಾಡಬೇಕು ಎಂದು ಹಾಲಹರವಿ ವಿರುದ್ಧ ಹರಿಹಾಯ್ದರು.
ಚುನಾವಣೆ ಸಮೀಪಿಸುತ್ತಿದ್ದತೆ ಬಾಬು ಜಗಜೀವನ ರಾಂ ಅವರು ಹಾಲಹರವಿಯವರಿಗೆ ನೆನಪಾಗುತ್ತಿದ್ದಾರೆ. ಬಾಬು ಜಗಜೀವನ ರಾಂ ಹೆಸರಿನಲ್ಲಿ ೧೦ ಪೈಸೆಯನ್ನೂ ನೀವು ವಿನಿಯೋಗಿಸಿಲ್ಲ. ಸಮಾಜಕ್ಕೆ ನಿಮ್ ಕೊಡುಗೆ ಏನು ಎಂಬುದನ್ನು ಬಹಿರಂಗ ಪಡಿಸಬೇಕು.

Previous articleಗಾಣಗಾಪುರ ಸಮಗ್ರ ಅಭಿವೃದ್ಧಿಗೆ 67 ಕೋಟಿ ರೂ.ಗಳ ಡಿಪಿಆರ್ ಸಿದ್ಧ
Next articleತುಲಾಭವನಕ್ಕೆ ಬೇಕಿದೆ ‘ತೂಕ’ದ ಲಕ್ಷ್ಯ…!