ಇಂದು ಹುಬ್ಬಳ್ಳಿ ಮ್ಯಾರಾಥಾನ್-೨೦೨೩

0
21

ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ಪ್ರತಿಷ್ಠಿತ ಸಂಸ್ಥೆಯಾದ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನ ೭೫ನೇ ವರ್ಷಾಚರಣೆ ಪ್ರಯುಕ್ತ ಸಂಸ್ಥೆಯು ನಮ್ಮ ನಡೆ ಭವ್ಯ ಭಾರತದ ಕಡೆ' ಎಂಬ ಧ್ಯೇಯ ವಾಕ್ಯದಡಿ ಜ.೨೨ರಂದು ಬೆಳಿಗ್ಗೆ ೬.೩೦ರಿಂದಹುಬ್ಬಳ್ಳಿ ಮ್ಯಾರಾಥಾನ್-೨೦೨೩’ ಹಮ್ಮಿಕೊಂಡಿದೆ.

ಬೆಳಿಗ್ಗೆ ೬.೩೦ಕ್ಕೆ ಬಿವಿಬಿ ಕಾಲೇಜಿನಿಂದ ಆರಂಭಗೊAಡು ಕಿಮ್ಸ್, ಹೊಸೂರು ವೃತ್ತ, ಕಾಟನ್ ಮಾರ್ಕೆಟ್ ಶಾರದಾ ಹೊಟೆಲ್, ವಿವೇಕಾನಂದ ಆಸ್ಪತ್ರೆ, ದೇಸಾಯಿ ಸರ್ಕಲ್, ಕೇಶ್ವಾಪುರ ರಸ್ತೆ, ರೈಲ್ವೆ ಸ್ಟೇಶನ್, ಲ್ಯಾಮಿಂಗ್ಟನ್ ರೋಡ್, ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಹೊಸೂರು ವೃತ್ತ, ಗೋಕುಲ ವೃತ್ತ, ತೋಳನಕೆರೆ, ಶಿರೂರ ಪಾರ್ಕ್ ಮಾರ್ಗವಾಗಿ ಸಾಗಿ ಬಿವಿಬಿ ಕಾಲೇಜು ತಲುಪಲಿದೆ. ಒಟ್ಟು ೧೪ ಕಿ.ಮೀ ಮ್ಯಾರಾಥಾನ್ ಇದಾಗಿದ್ದು, ೧೪ ವರ್ಷದೊಳಗಿನವರು, ೧೫ರಿಂದ ೪೯ ವರ್ಷದೊಳಗಿನವರು, ೫೦ ವರ್ಷ ಮೇಲ್ಪಟ್ಟವರು, ವಿಶೇಷ ಚೇತನರು ಹೀಗೆ ನಾಲ್ಕು ವಿಭಾಗಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಪಾಲ್ಗೊಳ್ಳಲು ನೋಂದಣಿ ಶುಲ್ಕ ಕಡ್ಡಾಯಗೊಳಿಸಲಾಗಿದೆ. ಸುಮಾರು ೫ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕೆಎಲ್‌ಇ ತಾಂತ್ರಿಕ ವಿವಿಯ ಕುಲಪತಿ ಡಾ.ಆಶೋಕ ಶೆಟ್ಟರ ತಿಳಿಸಿದ್ದಾರೆ.

Previous articleಬಿಜೆಪಿ ಎಂದರೆ ವಿಕಾಸ: ಕಾಂಗ್ರೆಸ್ ಎಂದರೆ ವಿನಾಶ
Next articleಸಂಸದ ಸಾಂಸ್ಕೃತಿಕ ಮಹೋತ್ಸವ ಗಾಳಿಪಟ ಉತ್ಸವದಲ್ಲಿಂದೇನು?