ಮುಂಬೈ: ಉಪಮುಖ್ಯಮಂತ್ರಿ ಅಜಿತ್ ಪವಾರ್ ಫೆ. 5ರ ಜಿಲ್ಲಾ ಪರಿಷತ್ ಚುನಾವಣೆಗಾಗಿ ಪುಣೆ ಜಿಲ್ಲೆಯಲ್ಲಿ ನಾಲ್ಕು ರ‍್ಯಾಲಿಗಳನ್ನು ನಡೆಸಲು ಮುಂಬೈಯಿಂದ ತೆರಳುವ ಮೊದಲು ಎಕ್ಸ್ ತಾಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ ಫೋಟೋ ಹಾಗೂ ಪೋಸ್ಟ್ ಹಾಕಿದ್ದರು. ಆದರೆ ಅವರ ದುರಂತಮಯ ಅಂತ್ಯದ ಬಳಿಕ ಅದನ್ನು ಅಳಿಸಿ ಹಾಕಲಾಗಿದೆ.
ಕೊನೆಯ ಪೋಸ್ಟ್‌ನಲ್ಲಿ ಹೇಳಿದ್ದೇನು?: ಎಕ್ಸ್ ತಾಣದಲ್ಲಿ ಅಜಿತ್ ಪವಾರ್ ಮಾಡಿರುವ ಕೊನೆಯ ಪೋಸ್ಟ್‌ನಲ್ಲಿ ಲಾಲಾ ಲಜಪತ್ ರಾಯ್ ಅವರನ್ನು ಸ್ಮರಿಸಿಕೊಂಡು, “ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ಮಹಾನ್ ಸ್ವಾತಂತ್ರ‍್ಯ ಹೋರಾಟಗಾರ, ಸ್ವರಾಜ್ಯದ ಘೋಷಕ ಮತ್ತು ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಜಿ ಅವರ ಜನ್ಮದಿನಾಚರಣೆಯಂದು ವಿನಮ್ರ ನಮನಗಳು! ಅವರ ದೇಶಭಕ್ತಿ ನಮಗೆ ಸದಾ ಸ್ಫೂರ್ತಿ ನೀಡುತ್ತದೆ” ಎಂದಿದ್ದಾರೆ.



















