Home Advertisement
Home ಸುದ್ದಿ ದೇಶ BJP ತೊರೆಯಲು ಸಿದ್ಧರಿದ್ದ ಅಜಿತ್ ಪವಾರ್: ಸಾವಿನ ತನಿಖೆ ‘ಸುಪ್ರೀಂ’ ಮೇಲ್ವಿಚಾರಣೆಗೆ ನೀಡಲು ಆಗ್ರಹ

BJP ತೊರೆಯಲು ಸಿದ್ಧರಿದ್ದ ಅಜಿತ್ ಪವಾರ್: ಸಾವಿನ ತನಿಖೆ ‘ಸುಪ್ರೀಂ’ ಮೇಲ್ವಿಚಾರಣೆಗೆ ನೀಡಲು ಆಗ್ರಹ

0
5

ಕೋಲ್ಕತ್ತಾ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅಸ್ತಿತ್ವದಲ್ಲಿರುವ ತನಿಖಾ ಪ್ರಕ್ರಿಯೆಗಳ ಮೂಲಕ ಸತ್ಯ ಹೊರಬರುವ ವಿಶ್ವಾಸ ಇಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ ನಿಗಾದಲ್ಲಿ ನಡೆಯುವ ತನಿಖೆಯಷ್ಟೇ ನಂಬಿಕೆಗೆ ಅರ್ಹ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:  ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ DCM ಅಜಿತ್ ಪವಾರ್ ನಿಧನ

ಸಿಂಗೂರ್‌ಗೆ ತೆರಳುವ ಮುನ್ನ ಕೋಲ್ಕತ್ತಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, “ನಾವು ಸುಪ್ರೀಂ ಕೋರ್ಟ್ ಮೇಲೆ ಮಾತ್ರ ನಂಬಿಕೆ ಇಟ್ಟಿದ್ದೇವೆ. ಉಳಿದ ಎಲ್ಲಾ ತನಿಖಾ ಸಂಸ್ಥೆಗಳು ಸಂಪೂರ್ಣವಾಗಿ ರಾಜಿ ಮಾಡಿಕೊಂಡಿವೆ” ಎಂದು ಗಂಭೀರ ಆರೋಪ ಮಾಡಿದರು.

ಎರಡು ದಿನಗಳ ಹಿಂದೆಯಷ್ಟೇ ಪವಾರ್ ಬಿಜೆಪಿ ತೊರೆಯಲು ಸಿದ್ಧರಿದ್ದಾರೆ ಎಂಬ ವರದಿಗಳು ಬಂದವು ಮತ್ತು ನಂತರ ಅಪಘಾತ ಸಂಭವಿಸಿದೆ ವಿರೋಧ ಪಕ್ಷಗಳ ಭವಿಷ್ಯ ಏನಾಗಿದೆಯೋ ನನಗೆ ತಿಳಿದಿಲ್ಲ ಆದರೆ ಅವರು ಆಡಳಿತ ಪಕ್ಷದ ಜೊತೆ ತುಂಬಾ ಇದ್ದರು. ಆದರೆ ಎರಡು ದಿನಗಳ ಹಿಂದೆ, ಪವಾರ್ ಬಿಜೆಪಿ ತೊರೆಯಲು ಸಿದ್ಧರಿದ್ದಾರೆ ಎಂದು ಬೇರೆ ಪಕ್ಷದ ಯಾರೋ ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದುಬಂದಿತು, ಮತ್ತು ಈಗ ಅದು ಇಂದು ಸಂಭವಿಸಿದೆ” ಎಂದು ಅವರು ಆರೋಪಿಸಿದರು.

ಇದನ್ನೂ ಓದಿ:  ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ Learjet 45 ವಿಮಾನ ಪತನಕ್ಕೆ ಕಾರಣವೇನು?

ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಸಮೀಪ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಸೇರಿದಂತೆ ಐವರು ಮೃತಪಟ್ಟಿದ್ದಾರೆ. ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಣೆಯಲ್ಲಿದ್ದ ಲಿಯರ್‌ಜೆಟ್ 46 ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ ಎಂದು ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ಮಾಹಿತಿ ನೀಡಿದೆ. ವಿಮಾನದಲ್ಲಿ ಪೈಲಟ್‌ಗಳು ಹಾಗೂ ಭದ್ರತಾ ಸಿಬ್ಬಂದಿ ಸೇರಿ ಐವರು ಪ್ರಯಾಣಿಸುತ್ತಿದ್ದರು.

ಈ ದುರ್ಘಟನೆ ಕುರಿತು ಮಾತನಾಡಿದ ಮಮತಾ ಬ್ಯಾನರ್ಜಿ, “ಇಂದು ಬೆಳಿಗ್ಗೆ ಅಜಿತ್ ಪವಾರ್ ಅವರ ಸಾವಿನ ಸುದ್ದಿ ತಿಳಿದು ನನಗೆ ನಿಜಕ್ಕೂ ಆಘಾತವಾಯಿತು. ಈ ದೇಶದಲ್ಲಿ ರಾಜಕೀಯ ನಾಯಕರಿಗೂ ಸಹ ಸುರಕ್ಷತೆ ಇಲ್ಲ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಆಡಳಿತ ವ್ಯವಸ್ಥೆಯ ಭಾಗವಾಗಿರುವವರೇ ಸುರಕ್ಷಿತರಲ್ಲ ಎಂಬ ಭಾವನೆ ಮೂಡುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ:  ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಾಜಕಾರಣಿಗಳು

ಅಜಿತ್ ಪವಾರ್ ಅವರ ಸಾವು ಕೇವಲ ಆಕಸ್ಮಿಕವೋ ಅಥವಾ ಇದರ ಹಿಂದೆ ಬೇರೆ ಯಾವುದೇ ಕಾರಣಗಳಿವೆಯೇ ಎಂಬುದು ಸಾರ್ವಜನಿಕವಾಗಿ ಸ್ಪಷ್ಟವಾಗಬೇಕು ಎಂದು ಒತ್ತಾಯಿಸಿದ ಮಮತಾ ಬ್ಯಾನರ್ಜಿ, “ಈ ಪ್ರಕರಣದ ಸತ್ಯ ಹೊರಬರಬೇಕಾದರೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲೇ ತನಿಖೆ ನಡೆಯಬೇಕು” ಎಂದು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.

ಈ ಹೇಳಿಕೆಗಳು ದೇಶದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಅಜಿತ್ ಪವಾರ್ ಅವರ ವಿಮಾನ ಅಪಘಾತ ಪ್ರಕರಣವು ಮತ್ತಷ್ಟು ರಾಜಕೀಯ ತಿರುವು ಪಡೆಯುವ ಸಾಧ್ಯತೆ ಕಾಣುತ್ತಿದೆ.

Previous articleವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಾಜಕಾರಣಿಗಳು
Next articleಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌