Home Advertisement
Home ನಮ್ಮ ಜಿಲ್ಲೆ ಕೊಪ್ಪಳ `ಕಾಂಗ್ರೆಸ್ ಸಿಎಂ ಗಾದಿ ಈಗಲೇ ಚರ್ಚೆ ಬೇಡ’

`ಕಾಂಗ್ರೆಸ್ ಸಿಎಂ ಗಾದಿ ಈಗಲೇ ಚರ್ಚೆ ಬೇಡ’

0
192
s narayan

ಕುಷ್ಟಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಅವರ ನಡುವೆ ಯಾವುದೇ ಭಿನ್ನಮತ ಇಲ್ಲ. ಮುಖ್ಯಮಂತ್ರಿ ಗಾದಿಗಾಗಿ ಸಹ ಗುದ್ದಾಟ ನಡೆದಿಲ್ಲ. ಇನ್ನು ಮಗು ಜನ್ಮ ತಾಳಿಲ್ಲ, ಹೆಸರು ಇಡೋದು ಯಾಕೆ? ಮೊದಲು ಕೂಸು ಹುಟ್ಟಲಿ. ಮುಖ್ಯಮಂತ್ರಿ ಯಾರು ಆಗುತ್ತಾರೆ ಎಂಬುದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಕೆಪಿಸಿಸಿಯ ರಾಜ್ಯ ಪ್ರಚಾರ ಸಮಿತಿಯ ಸದಸ್ಯ ಹಾಗೂ ನಿರ್ಮಾಪಕ ಎಸ್. ನಾರಾಯಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಸೋಲುವುದಿಲ್ಲ, ಅವರು ಹೀರೋ ಎಂದು ತಿಳಿಸಿದರು. ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಅಲೆ ಇದ್ದು, ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗೆಲ್ಲುವುದರ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Previous articleಮುನಿರತ್ನ ಸ್ವರ್ಧೆ ಕೇವಲ ಊಹಾಪೋಹ
Next articleಬೇರೆಯವರ ಮಾತಿಗೆ ಪ್ರತಿಕ್ರಿಯಿಸುವುದು ಟೈಂ ವೇಸ್ಟ್