ಭೀಕರ ರಸ್ತೆ ಅಪಘಾತ: ಮೂವರು ಸಾವು, ಐವರ ಸ್ಥಿತಿ ಗಂಭೀರ

0
2

ಕಾರ್ಕಳ: ಖಾಸಗಿ ಬಸ್‌ ಹಾಗೂ ಟ್ರಾಕ್ಸ್ ತೂಫಾನ್ ನಡುವೆ ಮುಖಮುಖಿ ಡಿಕ್ಕಿ ಆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಮಿಯಾರು ಗ್ರಾಮದ ಕಂಬಳ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡದಿದೆ.

ಕಾರ್ಕಳ ಕಡೆಯಿಂದ ಧರ್ಮಸ್ಥಳ ಕಡೆಗೆ ಹೋಗುತಿದ್ದ ತೂಫಾನ್ ಬೆಳ್ತಂಗಡಿ ಕಡೆಯಿಂದ ಅತಿವೇಗ ಹಾಗೂ ನಿರ್ಲಕ್ಷತನದಿಂದ ಬರುತಿದ್ದ ಖಾಸಗಿ ಬಸ್‌ ರಸ್ತೆಯ ಬಲ ಭಾಗಕ್ಕೆ ಬಂದು ತೂಪಾನ್‌ಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ತೂಫಾನ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ತೂಫನ್ ವಾಹನದಲ್ಲಿದ್ದ ಒಟ್ಟು 12 ಜನ ಹಾಗೂ 1 ಮಗುವಿನ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಮಗುವಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಾಳುಗಳು ಕೂಡ ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: ಜೈಲು ಹಕ್ಕಿಗಳ ಮಧ್ಯೆ ಅರಳಿದ ಪ್ರೀತಿ; ಪೆರೋಲ್‌ನಲ್ಲಿ ಮದುವೆಗೆ ಸಿದ್ಧತೆ

ಮೃತರು ಮೂಲತ ಗುಲ್ಬರ್ಗ ಜಿಲ್ಲೆಯವರಾಗಿದ್ದು ಚಾಲಕ ಮಣ್ಣಪ್ಪ, ಚೇತು, ರೋಹಿತ್‌ ಎಂದು ಗುರುತಿಸಲಾಗಿದೆ. ವಿವಿಧ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆದು ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆನ್ನಲಾಗಿದೆ.

ಕಾರ್ಕಳ ಪುಲ್ಕೆರಿ ಬೈಪಾಸ್‌ನಿಂದ ಮಾಳ ಘಾಟ್ವರೆಗೆ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅವೈಜ್ಞಾನಿಕವಾಗಿ ಕುಂಟುತ್ತಾ ನಡೆಯುತ್ತಿರುವ ಕಾಮಗಾರಿಯಿಂದಾಗಿ ಹಲವಾರು ಅಪಘಾತ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Previous articleಬೆಂಗಳೂರಿನಲ್ಲಿ ಬೆಂಜ್ ಅತ್ಯಾಧುನಿಕ ಶೋರೂಮ್ ಉದ್ಘಾಟನೆ