ಕುಮಾರಣ್ಣ ಸಿಎಂ ಆಗದಿದ್ದರೆ ನಿವೃತ್ತಿ: ಇಬ್ರಾಹಿಂ

0
28
ಇಬ್ರಾಹಿಂ

ವಿಜಯಪುರ: ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂಬುದನ್ನು ಬರೆದಿಟ್ಟುಕೊಳ್ಳಿ, ಅವರು ಮುಖ್ಯಮಂತ್ರಿಯಾಗದೇ ಇದ್ದರೆ ನಾನು ರಾಜಕೀಯವಾಗಿ ನಿವೃತ್ತಿಯಾಗುವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಘೋಷಿಸಿದರು.
ಜೆಡಿಎಸ್ ಪಂಚರತ್ನ ಯಾತ್ರೆ ವಿಜಯಪುರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ಯಾರು ಎಂದು ಹೇಳುವ ಶಕ್ತಿ ಕಾಂಗ್ರೆಸ್ ಮತ್ತು ಬಿಜೆಪಿಗೂ ಇಲ್ಲ. ರೈತರ ನೋವಿನ ಬಗ್ಗೆ ಮೋದಿಯವರಿಗೂ ಅರಿವಿಲ್ಲ ಎಂದರಲ್ಲದೇ ಫೆಬ್ರವರಿ ಕಳೆಯಲಿ ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವವರ ದೊಡ್ಡ ಪಟ್ಟಿಯನ್ನೇ ಹೇಳುವೆ ಎಂದರು.

Previous articleಹತಾಶೆ ಭಾವನೆಯಲ್ಲಿ ಆರೋಪ: ಸವದಿ ಪ್ರತಿಕ್ರಿಯೆ
Next articleರಾಜ್ಯದ ನಾಲ್ಕು ದಿಕ್ಕುಗಳಿಂದ ಬಿಜೆಪಿ ರಥಯಾತ್ರೆಗೆ ತಯಾರಿ: ಬೊಮ್ಮಾಯಿ