Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿಯಲ್ಲೂ ಪತ್ರಕರ್ತರ ಊಟಕ್ಕಾಗಿ 2 ಲಕ್ಷ ವಸೂಲಿ… !

ಹುಬ್ಬಳ್ಳಿಯಲ್ಲೂ ಪತ್ರಕರ್ತರ ಊಟಕ್ಕಾಗಿ 2 ಲಕ್ಷ ವಸೂಲಿ… !

0
4

ಹುಬ್ಬಳ್ಳಿ: ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಮನೆಗೆ ವಸತಿ ಸಚಿವ ಜಮೀರ್ ಅಹ್ಮದ್ ಭೇಟಿ ನೀಡಿದ ವೇಳೆ ಮಾಧ್ಯಮದ ಪ್ರತಿನಿಧಿಗಳು ಎಂದು ಹೇಳಿಕೊಂಡ ಕೆಲ ವ್ಯಕ್ತಿಗಳು ಪತ್ರಕರ್ತರ ಭೋಜನ ವ್ಯವಸ್ಥೆಗಾಗಿ 2 ಲಕ್ಷ ರೂ. ಪಡೆದಿದ್ದಾರೆ ಎಂದು ವರದಿಯಾದ ಬೆನ್ನ ಹಿಂದೆಯೇ ಹುಬ್ಬಳ್ಳಿಯಲ್ಲೂ ಭಾನುವಾರ ಮಾಧ್ಯಮ ಪ್ರತಿನಿಧಿಗಳು, ಪತ್ರಕರ್ತರು, ಛಾಯಾಗ್ರಾಹಕರೆಂದು ಹೇಳಿಕೊಂಡು 2 ಲಕ್ಷಕ್ಕೂ ಹೆಚ್ಚಿನ ಹಣ ಊಟಕ್ಕಾಗಿ ಪಡೆದಿದ್ದಾರೆ ಎಂಬ ವಿಷಯ ಹೊರಬಿದ್ದಿದೆ.


ಧಾರವಾಡದ ವಿಷಯ ಹೊರಬೀಳುತ್ತಿದ್ದಂತೆಯೇ ಹುಬ್ಬಳ್ಳಿಯಲ್ಲೂ ಗುಸು ಗುಸು ಶುರುವಾಗಿದೆ. ನಾನವನಲ್ಲ. ನಾವವರಲ್ಲ. ಅವರಂತೆ, ಇವರಂತೆ ಯಾರಂತೆ? ಹೀಗೆ ಶುರುವಾದ ಚರ್ಚೆ ಹಣ ಪಡೆದು ಬಿಲ ಸೇರಿದವರ ಬಂಡವಾಳ ಬಯಲು ಮಾಡಿದೆ.
ಸಚಿವರು ನೀಡಿದ 2 ಲಕ್ಷ ದುಡ್ಡಲ್ಲಿ 15ಕ್ಕೂ ಹೆಚ್ಚು ಜನ ಹಂಚಿಕೊಂಡಿದ್ದಾರಂತೆ. ಈ ವಿಷಯ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಬೆಕ್ಕಿಗೆ ಗಂಟೆ ಕಟ್ಟುವವರಾರು? ಇಂಥವರಿಗ್ಯಾಕೆ ಹಣ ಕೊಡ್ತಾರೆ ಎಂದು ಪ್ರಶ್ನಿಸುವಂತಾಗಿದೆ. ಮಾಧ್ಯಮ ವಲಯದಲ್ಲಿನ ಇಂತಹ ಬೆಳವಣಿಗೆಯಿಂದ ಎಲ್ಲೆಡೆ ಮುಜುಗರಕ್ಕೀಡು ಮಾಡಿದೆ