ರಾಯಚೂರು: ಎರಡು ಬೊಲೆರೊ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐದು ಜನರು ಮೃತಪಟ್ಟಿದ್ದು, 10 ಕುರಿಗಳು ಸಾವನ್ನಪ್ಪಿದ ಘಟನೆ ಸಿಂಧನೂರು ತಾಲೂಕಿನ ಬೂದಿಹಾಳ ಕ್ಯಾಂಪ್ ಸಮೀಪದ ಕನ್ನಾರಿ ಕ್ರಾಸ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಐವರು ಸಾವನ್ನಪ್ಪಿದ್ದು, ಯಾವ ಊರಿನವರು ಎಂದು ಸ್ಪಷ್ಟ ಮಾಹಿತಿ ಇಲ್ಲ. ಒಂದು ಬುಲೋರ್ ವಾಹನವೂ ಸಿಂಧನೂರಿನಿಂದ ಸಿರುಗುಪ್ಪಾ ಕಡೆಗೆ ತೆರಳುತ್ತಿದ್ದು, ಮತ್ತೊಂದು ಬೊಲೆರೊ ವಾಹನವೂ ಸಿರುಗುಪ್ಪಾದಿಂದ ಸಿಂಧನೂರು ಕಡೆಗೆ ಬರುತ್ತಿತ್ತು. ಒಂದು ಬೊಲೆರೊ ವಾಹನದಲ್ಲಿ ಕುರಿಗಳನ್ನು ತುಂಬಿಕೊಂಡು ಸಾಗುತ್ತಿತ್ತು ಎಂದು ತಿಳಿದುಬಂದಿದೆ.
ಈ ಕುರಿತಂತೆ ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿಗೆ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.









