ಲಕ್ಕುಂಡಿಯ ಮನೆಯಲ್ಲಿ 10ನೇ ಶತಮಾನದ ದೇವಾಲಯ ಪತ್ತೆ

0
1

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಕುಂಬಾರ ಓಣಿಯ ಮನೆಯೊಂದರಲ್ಲಿ 10ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾಗಿರುವ ಈಶ್ವರ ದೇವಾಲಯವೊಂದು ಮಂಗಳವಾರ ಪತ್ತೆಯಾಗಿದೆ.

ಗ್ರಾಮದ ಕುಂಬಾರ ಓಣಿಯಲ್ಲಿರುವ ಚೌಕಿಮಠ ಎಂಬುವವರ ಮನೆ ಒಳಾಂಗಣದಲ್ಲಿ ಸುಂದರವಾದ ಮಂಟಪ ಹಾಗೂ ಮಹಾಂತೇಶ್ವರ ದೇವರ ಮೂರ್ತಿಗಳಿವೆ. ಮನೆಯ ಕುಟುಂಬದ ಸದಸ್ಯರು ಓಡಾಡುವ ಹಾಲ್‌ನ ಪಕ್ಕದಲ್ಲಿಯೇ ಪುರಾತನ ಈಶ್ವರನ ಗರ್ಭ ಗುಡಿಯಿದೆ.

ಇದನ್ನೂ ಓದಿ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ

ಚೌಕಿಮಠ ಕುಟುಂಬದವರು ಕಳೆದ ನಾಲ್ಕು ತಲೆಮಾರುಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸುಮಾರು 10ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ಐತಿಹಾಸಿಕ ದೇವಸ್ಥಾನದ ಆವರಣವನ್ನೇ ಅವರು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ.

Previous articleದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ