ಬಾಗಲಕೋಟೆ: ಕುಡಿದ ಮತ್ತಿನಲ್ಲಿ ಕಾರು ಚಾಲಕ ತೋರಿದ ಅಚಾತುರ್ಯದಿಂದ ಇಬ್ಬರು ಮೃತಪಟ್ಟಿರುವ ಘಟನೆ ಬಾದಾಮಿ ತಾಲೂಕಿನ ಬಾಚಿನಗುಡ್ಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೋಟೆಲ್ ಮತ್ತು ಪಾನ್‌ಶಾಪ್‌ಗೆ ಚಾಲಕ ಕಾರು ನುಗ್ಗಿಸಿದ್ದರು. ಹೋಟೆಲ್ ಮಾಲೀಕ ವೀರಯ್ಯ ಭಂಡಾರಿ (49), ಸೋಮಲಿಂಗಪ್ಪ ಪಟ್ಟದಲ್ಲ (35) ಮೃತಪಟ್ಟಿದ್ದಾರೆ. ಬಾದಾಮಿ ಪೊಲೀಸರು ಸ್ಥಳಕ್ಕೆ ಭೆಟ್ಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.






















