ಪುರಾತನ ಪ್ರಸಿದ್ಧವಾದ ಉಡುಪಿಗೆ ಮತ್ತೆ ಹೆಚ್ಚಿನ ಐತಿಹಾಸಿಕ ಮೌಲ್ಯವನ್ನು ನೀಡಿದವರು ಮಧ್ವಾಚಾರ್ಯರು… ದ್ವಾಪರದ ಕೊನೆಗೆ ಸಮುದ್ರದಲ್ಲಿ ಮುಲುಗಿದ ದ್ವಾರಕೆಯಲ್ಲಿನ ಕೃಷ್ಣ ಪ್ರತಿಮೆಯನ್ನು ಎತ್ತಿ ತಂದು ಉಡುಪಿಯಲ್ಲಿ ಪ್ರತಿಷ್ಠೆ ಮಾಡುವ ಮೂಲಕ ಕಲಿಯುಗದ ಆರಾಧ್ಯ ನನ್ನು ಸಜ್ಜನ ಸಮುದಾಯಕ್ಕೆ ಸುಲಭವಾಗಿ ಸಿಗುವಂತೆ ಮಾಡಿದರು..
ಪರಿಪೂರ್ಣ ಪ್ರಮಾಣದ ಪೂಜೆ ಪುರಸ್ಕಾರಗಳಿಗಾಗಿ ಮಠದ ಪದ್ಧತಿಯಂತೆ ವ್ಯವಸ್ಥೆಗಾಗಿ ಎಂಟು ಯತಿ ಶಿಷ್ಯರನ್ನು ನೇಮಿಸಿದ್ದಾರೆ… ಸನ್ಯಾಸಿಗಳೇ ಪೂಜಿಸುವಂತ ದೇವ ಮಂದಿರ ಇದು.. ಇಡೀ ವಿಶ್ವದಲ್ಲಿ ಇಂದೇಯೂ ಇರಲಿಲ್ಲ. ಇಂದು ಕೂಡ ಎಲ್ಲೂ ಇಲ್ಲ ಇದೊಂದೇ ಕೃಷ್ಣ ಮಠ.. ಈ ಮಠ ಮಂದಿರವೂ ಹೌದು, ದೇಗುಲವೂ ಹೌದು, ಯಾಕೆಂದರೆ ಸನ್ಯಾಸಿಗಳ ಜಪದ ಮಂತ್ರ, ಪ್ರಣವ ಓಂಕಾರ, ಇದರ ಸಾಮಾನ್ಯ ವಿಶೇಷ ಪ್ರತಿಪಾದ್ಯ ದೇವರ ರೂಪ.
ಇದನ್ನು ಮೊದಲ ಬಾರಿಗೆ ತಂತ್ರಸಾರದ ಹಿನ್ನೆಲೆಯಲ್ಲಿ ಶೃತ ಪಡಿಸಿದವರು ಮಧ್ವಾಚಾರ್ಯರು.. ಅದಕ್ಕೆಂದೆ ಕೃಷ್ಣನಿಗೆ 8 ಯತಿಗಳ ಸಪರ್ಯ ಪರ್ಯಾಯ.. ಇದು ಪ್ರತಿಯೊಬ್ಬ ಮನುಷ್ಯರ ಹೃದಯ ಕಮಲದ ಬಗೆಯಾಗಿವೆ..
ಶ್ರೀ ಕೃಷ್ಣನ ಪ್ರಧಾನ ಪೂಜೆಯನ್ನು ನೆರವೇರಿಸಲು ಒಬ್ಬೊಬ್ಬ ಯತಿಗಳಿಗೆ ಎರಡು ತಿಂಗಳಂತೆ ಕಾಲ ವ್ಯವಸ್ಥೆಯನ್ನು ಮೊದಲು ಮಾಡಲಾಗಿದ್ದು ಇದನ್ನು ದೈಮಾಸಿಕವಾಗಿ ಪರ್ಯಾಯ ಎನ್ನಲಾಗಿತ್ತು… ಎರಡು ತಿಂಗಳು ಶ್ರೀ ಕೃಷ್ಣ ಪೂಜೆಯನ್ನು ನೆರವೇರಿಸಿದ ಯತಿಗಳು ಅಕ್ಷಯ ಪಾತ್ರೆಯ ಹಸ್ತಾಂತರ ಮೂಲಕ ಮುಂದಿನ ಪ್ರತಿಗಳಿಗೆ ಬಿಟ್ಟುಕೊಡುತ್ತಿದ್ದರು… ಪರ್ಯಾಯ ಪೀಠಸ್ತಾ ಯತಿಗಳು ತಾವೇ ಶ್ರೀಕೃಷ್ಣನಿಗೆ ಮಹಾಪೂಜೆಯನ್ನು ಮಾಡುತ್ತಾರೆ..
ಈ ದೈಮಾಸಿಕ ಪದ್ಧತಿಯು ಸುಮಾರು 250 ವರ್ಷಗಳವರೆಗೂ ನಡೆಯಿತು ಬಳಿಕ ಶ್ರೀ ವಾದಿರಾಜ ಗುರು ಸಾರ್ವಭೌಮರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು… ಅಷ್ಟ ಮಠದ ಯತಿಗಳಿಗೆ ರಥ ಬೀದಿಯಲ್ಲಿ ಪ್ರತ್ಯೇಕ ಮಠಗಳನ್ನು ಕಲ್ಪಿಸಿದರು.
ಯತಿಗಳ ಸಂಚಾರದ ಅನುಕೂಲಕ್ಕೆ ಪರ್ಯಾಯವನ್ನು ಎರಡು ವರ್ಷಗಳಿಗೆ ವಿಸ್ತರಿಸಿದರು. ಈ ಹೊಸ ಕ್ರಮಕ್ಕೆ ಸುಮಾರು 500ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ… ದ್ವೈವಾರ್ಷಿಕ ಪದ್ಧತಿ ಬಂದ ಮೇಲೆ ಮೊದಲ ಪರ್ಯಾಯವನ್ನು ಶ್ರೀ ವಾದಿರಾಜ ತೀರ್ಥರು ನೆರವೇರಿಸಿದರು… ಮೊದಲ ಪರ್ಯಾಯವು ಶ್ರೀ ಪಲಿಮಾರು ಮಠದಿಂದ ಆರಂಭವಾಗಿತ್ತು.
ಜನವರಿ 18ರ ಬೆಳಿಗ್ಗೆ ಶ್ರೀ ಮದ್ವಾಚಾರ್ಯರೇ ನಿರ್ಮಿಸಿದ ಕಾಪು ಗ್ರಾಮದ ಸಮೀಪದ ದಂಡ ತೀರ್ಥದಲ್ಲಿ ಸ್ನಾನವನ್ನು ಮಾಡಿ ಶ್ರೀ ಕೃಷ್ಣನ ಪೂಜೆಗಾಗಿ ಆಗಮಿಸುತ್ತಾರೆ.. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಜೋಡುಕಟ್ಟೆಯಿಂದ ಭವ್ಯವಾಗಿ ಸ್ವಾಗತವನ್ನು ಸಮರ್ಪಿಸುತ್ತಾರೆ. ಅತ್ಯಂತ ವೈಭವದ ಮೆರವಣಿಗೆಯಲ್ಲಿ ಬಾವಿ ಪರ್ಯಾಯ ಶ್ರೀಗಳು ಅಲಂಕೃತ ಪಲ್ಲಕ್ಕಿಯಲ್ಲಿ ಆಗಮಿಸುತ್ತಾರೆ. ಪರ್ಯಾಯ ಶ್ರೀಗಳನ್ನು ಹೊರತುಪಡಿಸಿ ಉಳಿದೆಲ್ಲ ಯತಿಗಳು ಅಲಂಕೃತ
ಪಲ್ಲಕ್ಕಿಯಲ್ಲಿ ಆಗಮಿಸುತ್ತಾರೆ.. ಮೆರವಣಿಗೆಯಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಬಾವಿ ಪರ್ಯಾಯ ಶ್ರೀಗಳ ಪಟ್ಟದ ದೇವರನ್ನು ತರುತ್ತಾರೆ… ರಥ ಬೀದಿಗೆ ಆಗಮಿಸಿದ ಕೂಡಲೇ ಪಲ್ಲಕ್ಕಿ ಯಿಂದ ಕೆಳಗಿಳಿದು ನಡೆದುಕೊಂಡು ಬರುತ್ತಾರೆ.
ಶ್ರೀ ಚಂದ್ರಮೌಲೇಶ್ವರ -ಶ್ರೀ ಅನಂತೇಶ್ವರ ದೇವರ ಸಾನಿಧ್ಯದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಶ್ರೀ ಕೃಷ್ಣ ಮಠವನ್ನು ಪ್ರವೇಶಿಸುತ್ತಾರೆ.. ಪರ್ಯಾಯ ಶ್ರೀಪಾದರು ಪರ್ಯಾಯ ಸ್ವೀಕರಿಸುವ ಯತಿಗಳನ್ನು ಆದರದಿಂದ ಸ್ವಾಗತಿಸುತ್ತಾರೆ. ಶ್ರೀ ಕೃಷ್ಣ, ಮುಖ್ಯಪ್ರಾಣ, ಶ್ರೀ ಮಧ್ವಾಚಾರ್ಯರ, ಗರುಡದೇವರ ದರ್ಶನವನ್ನು ಮಾಡುತ್ತಾರೆ. ಶ್ರೀ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಪ್ರಧಾನ ಮುಹೂರ್ತವಾದ ಅಕ್ಷಯ ಪಾತ್ರೆ ಹಸ್ತಾಂತರ ಕಾರ್ಯಕ್ರಮವು ನಡೆಯುತ್ತದೆ.
ಅಲ್ಲಿಂದ ಸಿಂಹಾಸನಕ್ಕೆ ಕರೆದುಕೊಂಡು ಬರುತ್ತಾರೆ.. ಮೊದಲು ತಮ್ಮ ಪಟ್ಟದ ದೇವರನ್ನು ಪೀಠದಲ್ಲಿಟ್ಟು ನಮಸ್ಕರಿಸುತ್ತಾರೆ… ಶುಭ ಮುಹೂರ್ತದಲ್ಲಿ ಇಲ್ಲಿಯವರೆಗೆ ಪರ್ಯಾಯವನ್ನು ನಡೆಸಿದ ಶ್ರೀಗಳು ಆಗಮಿಸಿ ಪರ್ಯಾಯ ಶ್ರೀಗಳನ್ನು ಕೈಹಿಡಿದು ಈ ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸುತ್ತಾರೆ… ಇಲ್ಲಿಂದ ಇನ್ನು ಎರಡು ವರ್ಷಗಳ ಪರ್ಯಂತ ಅವರು ಪರ್ಯಾಯ ಶ್ರೀಗಳು ಎಂದೆನಿಸಿಕೊಳ್ಳುತ್ತಾರೆ
ಪರ್ಯಾಯ ದರ್ಬಾರ್: ಸರ್ವಜ್ಞ ಪೀಠದ ಕಾರ್ಯಕ್ರಮದ ನಂತರ ಎಲ್ಲಾ ಯತಿಗಳು ಬಡಗು ಮಾಲಿಗೆಗೆ ಬರುತ್ತಾರೆ.. ಅಲ್ಲಿ ಅಲಂಕರಿಸುವ ಅರಳು ಗದ್ದೆಯಲ್ಲಿ ಆಸೀನರಾಗುತ್ತಾರೆ. ಎಲ್ಲಾ ಶ್ರೀಪಾದರಿಗು ಪರ್ಯಾಯ ಮಠದಿಂದ ಉಪಚಾರಗಳನ್ನು ಸಲ್ಲಿಸಲಾಗುತ್ತದೆ. ಶ್ರೀ ವಾದಿರಾಜರ ಕಾಲದಲ್ಲಿ ಇಲ್ಲಿಯೇ ಪರ್ಯಾಯ ದರ್ಬಾರ್ ನಡೆಯುತ್ತಿತ್ತು. ಈಗ ರಾಜಾ ಅಂಗಳದಲ್ಲಿ ನಡೆಯುತ್ತಿದೆ. ಆದ್ದರಿಂದ ಸಾಂಕೇತಿಕವಾದ ದರ್ಬಾರನ್ನು ಇಲ್ಲಿ ಮಾಡುತ್ತಾರೆ.
ಹೀಗೆ ಶ್ರೀ ಮದ್ವಾವಾದಿ ರಾಜರ ನಿರ್ದೇಶನಂತೆ ಅನೇಕ ಅರ್ಥ ಪೂರ್ಣವಾದ ಉಡುಪಿಯ ಪರ್ಯಾಯ ಮಹೋತ್ಸವವು ವಿಜೃಂಭಣೆಯಿಂದ ನೆರವೇರುತ್ತದೆ. ಕೃಷ್ಣಭಕ್ತರು ಎರಡು ವರ್ಷಗಳಿಗೊಮ್ಮೆ ಪರ್ಯಾಯ ಮಹೋತ್ಸವವನ್ನು ಕಣ್ಣು ತುಂಬಿಕೊಳ್ಳುತ್ತಾರೆ.









