ಬಳ್ಳಾರಿ ಗಲಭೆ ಪ್ರಕರಣ: CBI ತನಿಖೆಗೆ ವಹಿಸಿದರೆ ಮಾತ್ರ ನ್ಯಾಯ

0
10

CID ಮತ್ತು ಸ್ಥಳೀಯ ಪೊಲೀಸರಲ್ಲಿ ಯಾವುದೇ ವ್ಯತ್ಯಾಸವಿಲ್ಲ

ಬಳ್ಳಾರಿ: ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ, ಶ್ರೀರಾಮುಲು ಹಾಗೂ ಸತೀಶ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಈ ವೇಳೆ ಗಲಾಟೆಗೆ ಸಂಬಂಧಿಸಿದ ವಿವಿಧ ವಿಡಿಯೋ ಕ್ಲಿಪ್‌ಗಳನ್ನು ಬಿಡುಗಡೆ ಮಾಡಿ, ಘಟನೆ ಪೂರ್ವನಿಯೋಜಿತವಾಗಿಯೇ ನಡೆದಿದೆ ಎಂಬುದಕ್ಕೆ ಅವು ಸಾಕ್ಷಿ ಎಂದು ಹೇಳಿದರು.

ಗಲಾಟೆ ಆರಂಭವಾಗುವ ಮೊದಲುಲೇ ಶ್ರೀರಾಮುಲು ಅವರು ಅಲ್ಲಿಂದ ತೆರಳುವಂತೆ ಸತೀಶ್ ರೆಡ್ಡಿಗೆ ಸೂಚನೆ ನೀಡಿದ್ದರು ಎಂದು ಜನಾರ್ದನ ರೆಡ್ಡಿ ತಿಳಿಸಿದರು. ಆದರೆ ಇದಾದ ಬಳಿಕವೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಗಲಾಟೆಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:  ಬಡವರ ಸೇಬು ಖ್ಯಾತಿಯ ಬಾರೆ ಹಣ್ಣು: ರೈತರ ಬದುಕಿಗೆ ಹೊಸ ದಿಕ್ಕು

ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ವಿಡಿಯೋಗಳಲ್ಲಿ, ಸತೀಶ್ ರೆಡ್ಡಿ ಮೇಲೆ ಹಲ್ಲೆಗೆ ಮುಂದಾಗಿರುವ ದೃಶ್ಯಗಳು, ಅವಾಚ್ಯ ಶಬ್ದಗಳ ಬಳಕೆ, ಹಾಗೂ “ಶ್ರೀರಾಮುಲು ದೊಡ್ಡ ಬ್ಯಾಡ್ರವನೇ, ಅವನನ್ನು ಹೊಡೆಯಿರಿ” ಎಂಬ ರೀತಿಯ ನಿಂದನಾತ್ಮಕ ಮಾತುಗಳು ದಾಖಲಾಗಿವೆ ಎಂದು ಅವರು ಹೇಳಿದರು. ಅಲ್ಲದೆ, ಶ್ರೀರಾಮುಲು ಅವರನ್ನು ಕೊಲ್ಲಬೇಕು, ಹೊಡೆಯಬೇಕು ಎಂಬಂತೆ ಕೆಟ್ಟ ಪದ ಬಳಕೆ ಮಾಡಿರುವುದು ವಿಡಿಯೋಗಳಲ್ಲಿ ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಇನ್ನು ಕೆಲವು ವಿಡಿಯೋಗಳಲ್ಲಿ ಶ್ರೀರಾಮುಲು ಹಾಗೂ ಸತೀಶ್ ರೆಡ್ಡಿ ಪರಸ್ಪರ ಮೈಕೈ ಹಿಡಿದುಕೊಂಡಿರುವ ದೃಶ್ಯಗಳು ಕಾಣಿಸುತ್ತಿದ್ದು, ಈ ವಿಡಿಯೋಗಳು ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಆದರೆ ಅದರಲ್ಲಿ ಇರುವ ನಿಂದನಾತ್ಮಕ ಮತ್ತು ಅವಾಚ್ಯ ವಿಷಯವನ್ನು ಆಧಾರವಾಗಿಸಿಕೊಂಡು ಇದೀಗ ತಾವು ಸುದ್ದಿಗೋಷ್ಠಿ ನಡೆಸುತ್ತಿರುವುದಾಗಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ:  ಭಾರತೀಯ ಅಂತರಿಕ್ಷ ನಿಲ್ದಾಣಕ್ಕೆ ಶತಪ್ರಯತ್ನ

ಜಾತಿ ನಿಂದನೆ ಮತ್ತು ಪೂರ್ವ ಯೋಜನೆಯ ಆರೋಪ: ಸತೀಶ್ ರೆಡ್ಡಿ ಅವರು ಶ್ರೀರಾಮುಲು ಅವರ ಜಾತಿಯನ್ನು ಉಲ್ಲೇಖಿಸಿ ಅವಮಾನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದರು. ಈ ಘಟನೆ ಪೂರ್ವನಿಯೋಜಿತ (ಪ್ರಿಪ್ಲಾನ್) ಆಗಿಯೇ ನಡೆದಿದೆ ಎಂಬುದಕ್ಕೆ ವಿಡಿಯೋಗಳೇ ಸಾಕ್ಷಿ ಎಂದರು.

“ಮಧ್ಯಾಹ್ನ ಬ್ಯಾನರ್ ತೆಗೆಸಿದ ಬಳಿಕ, ರಾತ್ರಿ ಮತ್ತೆ ಬ್ಯಾನರ್ ಹಾಕಲು ಹೋಗಿ ಜಗಳ ಮಾಡೋಣ ಎಂಬ ಪ್ಲಾನ್ ಮಾಡಿಕೊಂಡೇ ಬಂದಿದ್ದಾರೆ” ಎಂದು ಅವರು ದೂರಿದರು. ಅಲ್ಲದೆ, ಶ್ರೀರಾಮುಲು ಅವರು ಫೈರಿಂಗ್ ಮಾಡಿಲ್ಲ, ಕೇವಲ ವಾಗ್ವಾದ ನಡೆದಿದೆ. ಆದರೆ ತಾವು ಸ್ಥಳಕ್ಕೆ ಬಂದಾಗ ತಮ್ಮ ಮೇಲೆ ಫೈರಿಂಗ್ ಮಾಡಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು.

ಇದನ್ನೂ ಓದಿ:  ʼರಕ್ಕಸಪುರ’ದಿಂದ ಬಂದ ʼನೀನಾ… ನೀನೇನಾʼ ಮೆಲೋಡಿ ಹಾಡು

ತನಿಖೆ ಬಗ್ಗೆ ಅಸಮಾಧಾನ: ಈ ಪ್ರಕರಣವನ್ನು ಸಿಐಡಿಗೆ ವಹಿಸಿರುವುದು ಕಣ್ಣೊರೆಸುವ ತಂತ್ರ ಮಾತ್ರ ಎಂದು ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. “ಪ್ರಮಾಣಿಕ ಅಧಿಕಾರಿಗಳಿದ್ದರೆ, ಇಷ್ಟೊತ್ತಿಗಾಗಲೇ ಆರೋಪಿಗಳನ್ನು ಬಂಧಿಸಬೇಕಿತ್ತು. ಹತ್ತು ದಿನಗಳಾದರೂ ಯಾವುದೇ ಬಂಧನವಾಗಿಲ್ಲ” ಎಂದು ಅವರು ಪ್ರಶ್ನಿಸಿದರು.

ಸಿಐಡಿ ಮತ್ತು ಸ್ಥಳೀಯ ಪೊಲೀಸರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಟೀಕಿಸಿದ ಅವರು, ಸಿಬಿಐ ತನಿಖೆಗೆ ವಹಿಸಿದರೆ ಮಾತ್ರ ನ್ಯಾಯ ಸಿಗಲಿದೆ ಎಂದು ಒತ್ತಾಯಿಸಿದರು. ಸಿಬಿಐ ಅಥವಾ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಪಾದಯಾತ್ರೆ ನಡೆಸಿ ಸಿಬಿಐ ತನಿಖೆ ಕೇಳಿದ್ದನ್ನು ಉಲ್ಲೇಖಿಸಿದ ಜನಾರ್ದನ ರೆಡ್ಡಿ, “ನಮಗೂ ನೂರಾರು ಮಾರ್ಗಗಳಿವೆ. ನಾವು ಕೋರ್ಟ್ ಮೂಲಕ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತೇವೆ” ಎಂದು ಎಚ್ಚರಿಸಿದರು.

ಹೋರಾಟದ ಘೋಷಣೆ: “ಭಯವಿಲ್ಲದಿದ್ದಾಗಲೇ ಶಾಸಕರು ಈ ರೀತಿ ವರ್ತನೆ ಮಾಡುತ್ತಾರೆ. ಸತೀಶ್ ರೆಡ್ಡಿ ಶ್ರೀರಾಮುಲು ಅವರಂತಹ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ ಎಂದರೆ ವ್ಯವಸ್ಥೆ ಯಾವ ಸ್ಥಿತಿಯಲ್ಲಿದೆ?” ಎಂದು ಪ್ರಶ್ನಿಸಿದರು. ಈಗಾಗಲೇ ಹತ್ತು ದಿನ ಕಳೆದಿದ್ದು, ಸಿಐಡಿ ಇನ್ನೂ ಹತ್ತು ದಿನ ಕಾಲಹರಣ ಮಾಡುತ್ತದೆ. ಯಾರನ್ನೂ ಬಂಧಿಸಿಲ್ಲ ಎಂದು ಆರೋಪಿಸಿದ ಅವರು, ಜನವರಿ 17ರಂದು ಬೃಹತ್ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದರು.

Previous articleಬಾಂಗ್ಲಾದಲ್ಲಿನ ಹಿಂದೂ ಹತ್ಯೆ ವಿರುದ್ಧ ಭಾರತ ಕ್ರಮಕ್ಕೆ ಮುಂದಾಗಲಿ