ಬಳ್ಳಾರಿ: ನಗರದ ಬ್ಯಾನರ್ ಘರ್ಷಣೆಯಲ್ಲಿ ಜೈಲು ಸೇರಿದ್ದ 25 ಆರೋಪಿಗಳಿಗೆ ಜಾಮೀನು ನೀಡಿ ಜನಪ್ರತಿನಿಧಿಗಳ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ಪ್ರಕರಣದ ಪ್ರಮುಖ ಆರೋಪಿ, ಖಾಸಗಿ ಅಂಗಕ್ಷಕ ಗುರುಚರಣ್‌ಸಿಂಗ್‌ಗೆ ಜಾಮೀನು ನಿರಾಕರಿಸಿದೆ. ಪ್ರಕರಣದ ತನಿಖೆಯ ವೇಳೆಯಲ್ಲಿ ದೊರೆತ ಸಾಕ್ಷಿ ಹಾಗೂ ವೀಡಿಯೊ ಫೋಟೇಜ್‌ಗಳ ಆಧಾರದಡಿ ಜ. 4ರಂದು ಬಂಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.
ಇದರಲ್ಲಿ ಬಿಜೆಪಿಯ ಹತ್ತು ಹಾಗೂ ಕಾಂಗ್ರೆಸ್‌ನ ಹದಿನೈದು ಸೇರಿ 25 ಆರೋಪಿಗಳಿಗೆ ಜಾಮೀನು ದೊರೆತಿದೆ. ಇವರ ವಿರುದ್ಧ ಬ್ರೂಸ್‌ಪೇಟೆ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು (ಸುಮೊಟೊ) ದಾಖಲಾಗಿತ್ತು. ಬ್ಯಾನರ್ ಅಳವಡಿಕೆ ಕುರಿತು ಘರ್ಷಣೆಗೆ ಸಂಬಂಧ ಠಾಣೆಯಲ್ಲಿ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ.























