ಮಾತಿಗೆ ತಪ್ಪಿದರೆ ಜೆಡಿಎಸ್‌ ವಿಸರ್ಜನೆ

0
14
ಕುಮಾರಣ್ಣ

ವಿಜಯಪುರ(ಸಿಂದಗಿ): ಆಡಳಿತ ನಡೆಸಲು ಸಂಪೂರ್ಣ ಬಹುಮತ ನೀಡಿದರೆ ರೈತರನ್ನು ಸಾಲದ ಸುಳಿಯಿಂದ ಹೊರ ತರುವೆ. ಕೊಟ್ಟ ಮಾತಿಗೆ ತಪ್ಪಿದರೆ ಪಕ್ಷವನ್ನು ವಿಸರ್ಜನೆ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ಪಟ್ಟಣದ ಅಂಜುಮನ್ ಮೈದಾನದಲ್ಲಿ ನಡೆದ ಪಂಚರತ್ನ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ರೈತರಿಗೆ ಯೋಜನೆಯ ಹೆಸರಿನಲ್ಲಿ ದ್ರೋಹವೆಸಗುತ್ತಿದೆ. ಕಾಂಗ್ರೆಸ್ ಪಕ್ಷ ಜನ ಪರ ಕೆಲಸ ಮಾಡದೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಜೆಪಿ ಜಾಹೀರಾತಿನ ಮೂಲಕ ಪ್ರಚಾರದಲ್ಲಿ ಮಗ್ನವಾಗಿದ್ದು ಯೋಜನೆ ಕಾಮಗಾರಿಗಳಲ್ಲಿ ಪರ್ಸಂಟೇಜ್ ತೆಗೆದುಕೊಳ್ಳುತ್ತಾ ತೆರಿಗೆ ಹಣ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

Previous articleತಾಯಿ, ಇಬ್ಬರು ಪುತ್ರಿಯರು ಆತ್ಮಹತ್ಯೆಗೆ ಶರಣು
Next articleಲಕ್ಷ್ಮೇಶ್ವರಕ್ಕೆ ಪ್ರೊ.ಸಿ.ಎನ್.ಆರ್.ರಾವ್