ಬಳ್ಳಾರಿ: ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಮೃತಪಟ್ಟಿದ್ದ ರಾಜಶೇಖರ ಅವರ ಸಾವಿಗೆ ಸಂಬಂಧಿಸಿದಂತೆ ಮಹತ್ವದ ಮತ್ತು ಸಂಚಲನಕಾರಿ ಮಾಹಿತಿ ಬಹಿರಂಗವಾಗಿದೆ. ರಾಜಶೇಖರ ದೇಹದಲ್ಲಿ ಪತ್ತೆಯಾದ ಗುಂಡು, ಖಾಸಗಿ ಗನ್ ಮ್ಯಾನ್ ಬಳಿಯಿದ್ದ ಪಿಸ್ತೂಲ್‌ನಿಂದಲೇ ಹಾರಿದದ್ದು ಎಂಬುದು ಎಫ್‌ಎಸ್‌ಎಲ್ (FSL) ವರದಿಯಿಂದ ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ವಿಚ್ಛೇದಿತ ಮಹಿಳೆಯ ಭೀಕರ ಕೊಲೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗನ್ ಮ್ಯಾನ್‌ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಬಂಧಿತ ಗನ್ ಮ್ಯಾನ್‌ಗಳಲ್ಲಿ ಬಳಿಯಿದ್ದ ಬಂದೂಕಿನಿಂದ ಹಾರಿದ ಗುಂಡೇ ರಾಜಶೇಖರ ದೇಹಕ್ಕೆ ತಗುಲಿತ್ತೆ ಎನ್ನಲಾಗಿದ್ದು.
ಬ್ಯಾನರ್ ಗಲಾಟೆಗೆ ಕಾರಣರಾದ ಎರಡೂ ಕಡೆಯಿಂದ ತಲಾ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ ಆರೋಪದಡಿ ಈ ಬಂಧನಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ವಿಚ್ಛೇದಿತ ಮಹಿಳೆಯ ಭೀಕರ ಕೊಲೆ
ಬಳ್ಳಾರಿಯಲ್ಲಿ ನಡೆದ ಈ ಬ್ಯಾನರ್ ಗಲಾಟೆ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಗುಂಡಿನ ದಾಳಿಯಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವುದು ಪ್ರಕರಣಕ್ಕೆ ಇನ್ನಷ್ಟು ಗಂಭೀರತೆ ತಂದಿದೆ. ಆರಂಭದಲ್ಲಿ ಗೊಂದಲಕ್ಕೆ ಕಾರಣವಾಗಿದ್ದ ಫೈಯರಿಂಗ್ ವಿಚಾರ ಇದೀಗ ಎಫ್‌ಎಸ್‌ಎಲ್ ವರದಿಯೊಂದಿಗೆ ಸ್ಪಷ್ಟತೆ ಪಡೆದಿದೆ.
ಘಟನೆಯ ಹಿನ್ನೆಲೆ ಹಾಗೂ ಶಸ್ತ್ರಾಸ್ತ್ರ ಬಳಕೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಸೂಚಿಸಿವೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.





















