ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ವಿಚಾರದಲ್ಲಿ ಗಲಾಟೆ ನಡೆದಿದೆ. ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಬೇಕಿತ್ತು. ಆದರೆ ಶಾಸಕ ಜನಾರ್ದನ ರೆಡ್ಡಿ ಅವರ ಸಣ್ಣ ಮನಸ್ಥಿತಿಯಿಂದ ಇಂತಹ ಘಟನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ಖಾನ್ ಹೇಳಿದರು.
ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ವೇಳೆ ಮೃತಪಟ್ಟ ರಾಜಶೇಖರ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾನರ್ ಕಟ್ಟೋ ವಿಚಾರದಲ್ಲಿ ದೊಡ್ಡ ಮನಸ್ಸು ಮಾಡಬೇಕಿತ್ತು ಜನಾರ್ದನ ರೆಡ್ಡಿ ಅವರು. ಆದರೆ ಸಣ್ಣತನ ತೋರಿದ್ದಾರೆ, ಮಾಜಿ ಮಂತ್ರಿಗಳ ಚಿಲ್ಲರೆತನ ಇದು ಎಂದರು.
ಇದನ್ನೂ ಓದಿ: ಜನಾರ್ದನ ರೆಡ್ಡಿ ವರ್ಸಸ್ ಭರತ ರೆಡ್ಡಿ ಇದೇ ಮೊದಲಲ್ಲ!
ಭರತ್ ರೆಡ್ಡಿಗೆ ಫೋನ್ ಮಾಡಿ ಬ್ಯಾನರ್ ತೆಗಿ ಅಂದ್ರೆ, ತೆಗೆಯುತ್ತಿದ್ದೆವು ಎಂದರಲ್ಲದೇ ಘಟನೆಯಲ್ಲಿ ಎಸ್ಪಿ ಅಮಾನತು ಆಗಿರುವುದು ಸಮರ್ಥನೀಯ. ಎಸ್‌ಪಿ ಜವಾಬ್ದಾರಿ ಹೆಚ್ಚಾಗುತ್ತದೆ. ಒಂದು ಸಲ ಚಾರ್ಜ್ ತಗೊಂಡ ಮೇಲೆ ಮುಗಿತು. ಎಸ್ಪಿ ಆತ್ಮಹತ್ಯೆ ವಿಚಾರ ಸುಳ್ಳು. ಚಿತ್ರದುರ್ಗ ಎಸ್ಪಿ ಚಾರ್ಜ್ ಇದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಮೀರ್ ಹೇಳಿದರು.








